ಬಾಲಿವುಡ್ ನಟಿ ಜೂಹಿ ಚಾವ್ಲಾ
ಬಾಲಿವುಡ್ ನಟಿ ಜೂಹಿ ಚಾವ್ಲಾ

ಭಾರತದಲ್ಲಿ 5ಜಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲ!

ರೇಡಿಯೊಫ್ರೀಕ್ವೆನ್ಸಿ (ಆರ್ ಎಫ್) ವಿಕಿರಣಗಳ ಕುರಿತುನಿರಂತರ ಜಾಗೃತಿ ಮೂಡಿಸುತ್ತಿರುವ ಬಾಲಿವುಡ್ ನಟಿ ಜೂಹಿ ಚಾವ್ಲ ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. 
Published on

ನವದೆಹಲಿ: ರೇಡಿಯೊಫ್ರೀಕ್ವೆನ್ಸಿ (ಆರ್ ಎಫ್) ವಿಕಿರಣಗಳ ಕುರಿತುನಿರಂತರ ಜಾಗೃತಿ ಮೂಡಿಸುತ್ತಿರುವ ಬಾಲಿವುಡ್ ನಟಿ ಜೂಹಿ ಚಾವ್ಲ ಭಾರತದಲ್ಲಿ 5 ಜಿ ಜಾರಿ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ. 

5 ಜಿ ತಂತ್ರಜ್ಞಾನ ಜಾರಿಯಾದಲ್ಲಿ ಅದರಿಂದ ಈಗಿರುವ ವಿಕರಣಗಳಿಗಿಂತ 10-100 ಪಟ್ಟು ಹೆಚ್ಚಿನ ಆರ್ ಎಫ್ ರೇಡಿಯೇಷನ್ ಜನ ಹಾಗೂ ಪ್ರಾಣಿಗಳ ಮೇಲೆ ಬೀರುತ್ತದೆ ಎಂದು ಜೂಹಿ ಚಾವ್ಲ 5 ಜಿ ಜಾರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ನ್ಯಾ.ಸಿ ಹರಿಶಂಕರ್ ಈ ಅರ್ಜಿ ಕುರಿತ ವಿಚಾರಣೆ ನಡೆಸುವುದರಿಂದ ಹಿಂದೆ ಸರಿದಿದ್ದು, ದೆಹಲಿ ಹೈಕೋರ್ಟ್ ನ ಮತ್ತೊಂದು ಪೀಠಕ್ಕೆ ವರ್ಗಾವಣೆ ಮಾಡಿದೆ. ಜೂ.02 ರಂದು ಅರ್ಜಿ ವಿಚಾರಣೆಗೆ ಬರಲಿದೆ.  

ಚಾವ್ಲಾ ಅವರ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದು, 5ಜಿ ತಂತ್ರಜ್ಞಾನ ಮನುಷ್ಯರಿಗೆ ಹಾಗೂ ಎಲ್ಲಾ ವಿಧದ ಜೀವಿಗಳಿಗೆ ಸುರಕ್ಷವಾಗಿರಲಿದೆ ಎಂಬುದನ್ನು ಪ್ರಮಾಣೀಕರಿಸಲು ಹಾಗೂ ಆರ್ ಎಫ್ ರೇಡಿಯೇಷನ್ ಗೆ ಸಂಬಂಧಿಸಿದಂತೆ ಇದಕ್ಕೆ ಪೂರಕವಾದ ಅಧ್ಯಯನಗಳನ್ನು ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಲಾಗಿದೆ" ಎಂದು ತಿಳಿಸಿದ್ದಾರೆ. 

5 ಜಿ ಯೋಜನೆಗಳಿಂದ ಮನುಕುಲ ಹಾಗೂ ಭೂಮಿಯ ಪರಿಸರಕ್ಕೆ ಗಂಭೀರ ಹಾನಿಯುಂಟಾಗಲಿದೆ. ಈಗ ಸಂಗ್ರಹಿಸಲಾಗಿರುವ ಕ್ಲಿನಿಕಲ್ ಸಾಕ್ಷ್ಯಗಳ ಪ್ರಕಾರ ಕ್ಯಾನ್ಸರ್, ಹೃದಯ ಸಮಸ್ಯೆಗಳು, ಮಧುಮೇಹದಂತಹ ಆಧುನಿಕ ನಾಗರಿಕತೆಯ ಆರೋಗ್ಯ ಸಮಸ್ಯೆಗಳು ಎಲೆಕ್ಟ್ರ‍ೋ ಮ್ಯಾಗ್ನೆಟಿಕ್ ಮಾಲಿನ್ಯದಿಂದ ಉಂಟಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ 10,000 ಅಧ್ಯಯನಗಳಿವೆ ಅದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com