ಚೆನ್ನೈ: ಒಟಿಟಿ ವೇದಿಕೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನವೆಂಬರ್ 2 ರಂದು ಬಿಡುಗಡೆಯಾಗಿರುವ
ನಟ ಸೂರ್ಯ ಅಭಿನಯದ ತಮಿಳು ಚಿತ್ರ ' ಜೈ ಭೀಮ್' ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ಧ ಅಭಿಪ್ರಾಯಗಳು ಕೇಳಿಬರುತ್ತಿವೆ.
ಅನೇಕ ಮಂದಿ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದರೆ, ತಮಿಳುನಾಡು ಬಿಜೆಪಿ ಮುಖಂಡ ಹೆಚ್ ರಾಜಾ, ಟ್ವೀಟರ್ ನಲ್ಲಿ ಸೂರ್ಯ ಅವರನ್ನು ಟೀಕಿಸಿದ್ದು, ಅವರನ್ನು 'ಸ್ವಾರ್ಥಿ' ಅಂತಾ ಕರೆದಿದ್ದಾರೆ.
ನೂತನ ರಾಷ್ಟ್ರೀಯ ಶಿಕ್ಷಣದಡಿ ಮೂರು ಭಾಷೆಗಳನ್ನು ನಮ್ಮ ಮಕ್ಕಳು ಕಲಿಯಬಾರದು ಎಂದು ಹೇಳುವ ವ್ಯಕ್ತಿಯ ಚಿತ್ರ (ಜೈ ಭೀಮ್ ) ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ನಂತರ ಸ್ವಾರ್ಥತತೆ ಎಷ್ಟಿದೆ ಎಂಬುದು ಅರ್ಥವಾಗಿದೆ ಎಂದು ಟ್ವೀಟರ್ ನಲ್ಲಿ ರಾಜಾ ಬರೆದುಕೊಂಡಿದ್ದಾರೆ.
ತಮಿಳುನಾಡು ಬಿಜೆಪಿ ಮುಖಂಡ ಈ ರೀತಿಯಾಗಿ ಮಾಡಿದ್ದ ಟ್ವೀಟ್ ನ್ನು ಸೂರ್ಯ ಲೈಕ್ ಮಾಡಿದ್ದು, ನಟನ ಪರವಾಗಿ ಅನೇಕ ಮಂದಿ ಬಿಜೆಪಿ ಮುಖಂಡನಿಗೆ ತಕ್ಕ ಪ್ರತಿಕ್ರಿಯೆ ನೀಡಿದ್ದಾರೆ.
ಟಿ. ಜೆ ಜ್ಞಾನವೇಲ್ ನಿರ್ದೇಶಿಸಿರುವ ಈ ಚಿತ್ರವನ್ನು ಸೂರ್ಯ ಮತ್ತು ಜ್ಯೋತಿಕಾ, 2 ಡಿ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಪ್ರಕಾಶ್ ರಾಜ್, ರಾಜಿಶಾ ವಿಜಯನ್, ಮತ್ತಿತರರು ಅಭಿನಯಿಸಿದ್ದಾರೆ.
Advertisement