ದೆಹಲಿಯಲ್ಲಿ ದಟ್ಟ ವಾಯುಮಾಲಿನ್ಯ: ಜನರು ಪರಿಸ್ಥಿತಿಯ ತೀವ್ರತೆ ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದ ತಜ್ಞರು 

ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (AQI) 530 ಕ್ಕೆ ತಲುಪುತ್ತಿದ್ದಂತೆ, ದೆಹಲಿಯಲ್ಲಿ ಗಾಳಿಯು ಉಸಿರಾಡಲು ಅಪಾಯಕಾರಿ ಆಗುತ್ತಿದೆ, ಆರೋಗ್ಯ ತಜ್ಞರು ಮತ್ತು ಪರಿಸರ ಕಾರ್ಯಕರ್ತರು ಬೇಜವಾಬ್ದಾರಿ ನಡವಳಿಕೆಗಾಗಿ ಜನರ ವಿರುದ್ಧ ಬೆರಳು ತೋರಿಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು (AQI) 530 ಕ್ಕೆ ತಲುಪುತ್ತಿದ್ದಂತೆ, ದೆಹಲಿಯಲ್ಲಿ ಗಾಳಿಯು ಉಸಿರಾಡಲು ಅಪಾಯಕಾರಿ ಆಗುತ್ತಿದೆ, ಆರೋಗ್ಯ ತಜ್ಞರು ಮತ್ತು ಪರಿಸರ ಕಾರ್ಯಕರ್ತರು ಬೇಜವಾಬ್ದಾರಿ ನಡವಳಿಕೆಗಾಗಿ ಜನರ ವಿರುದ್ಧ ಬೆರಳು ತೋರಿಸುತ್ತಿದ್ದಾರೆ.

ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸರ್ ಗಂಗಾರಾಮ್ ಆಸ್ಪತ್ರೆಯ ಹೃದ್ರೋಗ ಶಾಸ್ತ್ರದ ಪ್ರಾಧ್ಯಾಪಕ ಡಾ ಅರುಣ್ ಮೊಹಂತಿ, "ಇಂತಹ ಗಾಳಿಯು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಹೃದಯ ಸಂಬಂಧಿ ಮತ್ತು ಇತರ ಹೃದಯ ಕಾಯಿಲೆ ಇರುವವರಿಗೆ ಇನ್ನಷ್ಟು ತೊಂದರೆ ನೀಡುತ್ತದೆ ಎಂದರು.

Interstitial Lung Disease (ಐಎಲ್‌ಡಿ), Chronic obstructive pulmonary disease(ಸಿಒಪಿಡಿ) ಯಿಂದ ಬಳಲುತ್ತಿರುವ ರೋಗಿಗಳು ಸಹ ಅಪಾಯದ ವಲಯದಲ್ಲಿದ್ದಾರೆ. ಇದು ಆಘಾತಕಾರಿ ಆದರೆ ಸತ್ಯವೆಂದರೆ ಶೇಕಡಾ 10 ರಿಂದ 15 ರಷ್ಟು ಮಕ್ಕಳು ಆಸ್ತಮಾ, ಅಲರ್ಜಿಕ್ ಬ್ರಾಂಕೈಟಿಸ್‌ನಿಂದ ಬಳಲುತ್ತಿದ್ದಾರೆ. ಕೋವಿಡ್ -19ನಿಂದ ಚೇತರಿಸಿಕೊಂಡ ಮಂದಿಯ ಶ್ವಾಸಕೋಶ ಮತ್ತಷ್ಟು ಸೂಕ್ಷ್ಮವಾಗಿರುತ್ತದೆ ಎಂದು ಡಾ ಮೊಹಂತಿ ಹೇಳುತ್ತಾರೆ.

ಹೆಚ್ಚಿನ AQI ನಿಂದ ಶ್ವಾಸಕೋಶದ ಕಾಯಿಲೆ ಕಾಣಿಸಿಕೊಂಡರೆ ಅಂತಹ ಮಕ್ಕಳ ಪರಿಸ್ಥಿತಿಯು ತೊಂದರೆಗೊಳಗಾಗಬಹುದು, ಗರ್ಭಿಣಿಯರಿಗೂ ಸಹ ಅಪಾಯ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ವಾಯು ಮಾಲಿನ್ಯವು ಹೆಚ್ಚು ಹೃದಯಾಘಾತಗಳಿಗೆ ಕಾರಣವಾಗುತ್ತದೆ, ಇದರಿಂದ ರಕ್ತನಾಳಗಳು ಮುಚ್ಚುವುದು ಹೆಚ್ಚು. ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ, ಇದು ಜನರಲ್ಲಿ ಹೆಚ್ಚು ಥ್ರಂಬೋಸಿಸ್ (ರಕ್ತ ಹೆಪ್ಪುಗಟ್ಟುವಿಕೆಯ ರಚನೆ) ಅನ್ನು ಉಂಟುಮಾಡುತ್ತದೆ, ಗಾಳಿಯಲ್ಲಿನ ಕಣಗಳು ಅನೇಕ ವೈರಸ್‌ಗಳಿಗೆ ವಾಹಕಗಳಾಗಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. 

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಉಪ ಪ್ರಧಾನ ವ್ಯವಸ್ಥಾಪಕ (ಡಿಜಿಎಂ) ಆರ್‌ಕೆ ಜೆನಮಣಿ ಅವರ ಪ್ರಕಾರ, ದೆಹಲಿಯಲ್ಲಿ AQI ಮಟ್ಟವು 550 ರ ಗಡಿಯನ್ನು ದಾಟಿದೆ, ಇದು ತೀವ್ರ ಸ್ಥಿತಿಗೆ ಹೋಗುತ್ತದೆ.ರಸ್ತೆಗಳು ಸರಿಯಾಗಿ ಕಾಣಿಸುವುದಿಲ್ಲ. ಅದಾಗ್ಯೂ, ಎಕ್ಯುಐ ಮಟ್ಟ ಮುಂದಿನ 24 ಗಂಟೆಗಳಲ್ಲಿ ಸುಧಾರಿಸಲಿದೆ. ಮುಂದಿನ 10 ದಿನಗಳಲ್ಲಿ ದೆಹಲಿಯಲ್ಲಿ ಮಳೆಯಾಗುವುದಿಲ್ಲ ಎಂದು ಜೆನಮಣಿ ಹೇಳುತ್ತಾರೆ. 

ನ್ಯಾಯಾಲಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿದ ನಿಯಮಗಳ ಸಂಪೂರ್ಣ ಉಲ್ಲಂಘನೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿತು, ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಪಟಾಕಿ ಸಿಡಿಸುತ್ತಾರೆ, ಇದರಿಂದ ವಾಯುಮಾಲಿನ್ಯ ಉಂಟಾಗುತ್ತದೆ ಎಂದು ಪರಿಸರ ತಜ್ಞ ಮನು ಸಿಂಗ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com