ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಕೇಸಿನಿಂದ ಎನ್ ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಗೆ ಕೊಕ್
ಮುಂಬೈ: ಹೈಪ್ರೊಫೈಲ್ ಡ್ರಗ್ ಕೇಸಿನ ತನಿಖೆ ನಡೆಸುತ್ತಿದ್ದ ಎನ್ ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆಯನ್ನು ಕೇಸಿನ ವಿಚಾರಣೆಯಿಂದ ಕೈಬಿಡಲಾಗಿದೆ. ಈ ಕೇಸನ್ನು ಇನ್ನು ದೆಹಲಿಯ ಎನ್ ಸಿಬಿ ಘಟಕದ ಸಂಜಯ್ ಸಿಂಗ್ ಅವರು ತನಿಖೆ ನಡೆಸಲಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿದಂತೆ ನಾರ್ಕೊಟಿಕ್ ಸಾಗಾಣೆ, ಪೂರೈಕೆ ಆರೋಪ ಎನ್ ಸಿಪಿ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ ವಿರುದ್ಧ ಕೂಡ ಕೇಳಿಬಂದಿದೆ.
ಸಮೀರ್ ವಾಂಖೆಡೆ ವಿರುದ್ಧ ಆರ್ಯನ್ ಖಾನೇ ಪ್ರಕರಣದಲ್ಲಿ ಲಂಚ ಕೇಳಿದ ಆರೋಪ ಬಂದ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿದೆ ಎಂದು ಹೇಳಲಾಗುತ್ತಿದೆ. ಭ್ರಷ್ಟಾಚಾರ, ಹಣ ಸುಲಿಗೆ, ಬೆದರಿಕೆ, ಸಾಕ್ಷಿಗಳ ನಾಶ ಹೀಗೆ 26 ಕೇಸುಗಳನ್ನು ಇಲಾಖಾವಾರು ತನಿಖೆಯಲ್ಲಿ ಸಮೀರ್ ವಾಂಖೆಡೆಯನ್ನು ಕೈಬಿಡಲಾಗಿದೆ.
ಪ್ರಕರಣಗಳ ಪಾರದರ್ಶಕ ತನಿಖೆಯನ್ನು ನಡೆಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮೂಲವೊಂದು ತಿಳಿಸಿದೆ, ಇಲಾಖಾ ತನಿಖೆಯು ಆರ್ಯನ್ ಖಾನ್ ಪ್ರಕರಣದಲ್ಲಿ ಹಲವಾರು ಆರೋಪಗಳನ್ನು ಎದುರಿಸಿದೆ. ಆರ್ಯನ್ ಖಾನ್ ಪ್ರಕರಣದಲ್ಲಿ ವಾಂಖೆಡೆ ಸರಿಯಾದ ಕ್ರಮಗಳನ್ನು ಅನುಸರಿಸಿಲ್ಲ. ಅಲ್ಲದೆ, ವಾಂಖೆಡೆ ತಂಡ 25 ಕೋಟಿ ಬೇಡಿಕೆ ಇಟ್ಟಿದೆ ಎಂದು ಪ್ರಭಾಕರ್ ಸೈಲ್ ಮಾಡಿರುವ ಆರೋಪ ಗಂಭೀರವಾಗಿದೆ. ಮುಂಬೈ ಪೊಲೀಸರ ಬಳಿ ಕೆಲವು ಸಿಸಿಟಿವಿ ದೃಶ್ಯಾವಳಿಗಳಿವೆ. ಮಾದಕ ದ್ರವ್ಯ ವಿರೋಧಿ ಏಜೆನ್ಸಿಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಅವರನ್ನು ತೆಗೆದುಹಾಕುವುದು ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ವಾಂಖೆಡೆ, ನವಾಬ್ ಮಲಿಕ್ ಎನ್‌ಸಿಬಿ ಅಧಿಕಾರಿ ನಿರ್ವಹಿಸಿದ ಪ್ರಕರಣಗಳ ಮರು ತನಿಖೆಗೆ ಒತ್ತಾಯಿಸಿದರು. ಇದು ಈಗಷ್ಟೇ ಪ್ರಾರಂಭವಾಗಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕತೆಗೊಳಿಸಲು ಸಮೀರ್ ವಾಂಖೆಡೆಯವರನ್ನು ವರ್ಗಾವಣೆ ಮಾಡಲಾಗಿದೆ.
ಆದರೆ ಸಮೀರ್ ವಾಂಖೆಡೆ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ