ಸಂಭಾಲ್: ಉತ್ತರ ಪ್ರದೇಶ ಚುನಾವಣೆಯ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಿಂದೂ ಧರ್ಮದ ಬಗ್ಗೆ ಅನಾವಶ್ಯಕ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಪುಸ್ತಕದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಹಿಂದುತ್ವವನ್ನು ಇಸೀಸ್ ಹಾಗೂ ಬೊಕೊ ಹರಾಮ್ ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿ ವಿವಾದಕ್ಕೆ ಕಾರಣರಾಗಿದ್ದರು.
ಈಗ ಈ ಸಾಲಿಗೆ ಮತ್ತೋರ್ವ ಕಾಂಗ್ರೆಸ್ ನಾಯಕ ಸೇರ್ಪಡೆಯಾಗಿದ್ದಾರೆ. ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವವರೆಲ್ಲಾ ಸಾಧುಗಳಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ರಶೀದ್ ಅಳ್ವಿ ರಾಮಾಯಣದ ರಾಕ್ಷಸ ಪಾತ್ರವನ್ನು ಉಲ್ಲೇಖಿಸಿ ಈ ರೀತಿ ಹೇಳಿದ್ದಾರೆ.
ಅಳ್ವಿಯವರ ಈ ಹೇಳಿಕೆಗೆ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರಿಂದ ತೀಕ್ಷ್ಣವಾದ ಪ್ರತಿಕ್ರಿಯೆ ಬಂದಿದ್ದು, ಈ ರೀತಿ ಹೇಳುವವರೆಲ್ಲಾ; ರಾಕ್ಷಸರು"; ಎಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಉತ್ತರಪ್ರದೇಶದ ಸಂಭಾಲ್ನಲ್ಲಿ ಗುರುವಾರ ರಾತ್ರಿ ನಡೆದ "ಕಲ್ಕಿ ಮಹೋತ್ಸವದಲ್ಲಿ ಅಳ್ವಿ ಈ ಹೇಳಿಕೆ ನೀಡಿದ್ದಾರೆ. ಜೈ ಶ್ರೀ ರಾಮ್ ಘೋಷಣೆ ಕೂಗುವ ಮೂಲಕ ಕೆಲವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರೆಲ್ಲಾರು ಮುನಿಗಳು (ಋಷಿಗಳು) ಅಲ್ಲ" ಮತ್ತು ಇಂತಹವರಿಂದ ಎಚ್ಚರವಾಗಿರಬೇಕಾದ ಅಗತ್ಯವಿದೆ. ರಾಮರಾಜ್ಯದಲ್ಲಿ ದ್ವೇಷಕ್ಕೆ ಯಾವುದೇ ಅವಕಾಶವಿಲ್ಲ ಎಂದು ಕಾಂಗ್ರೆಸ್ ನಾಯಕ ಅಳ್ವಿ ಹೇಳಿದ್ದಾರೆ.
Advertisement