ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ಪಂಜಾಬ್​ನಲ್ಲಿ ಆಪ್ ಆಧಿಕಾರಕ್ಕೆ ಬಂದರೆ 18 ತುಂಬಿದ ಮಹಿಳೆಯರಿಗೆ ತಿಂಗಳಿಗೆ ಸಾವಿರ ರೂ: ದೆಹಲಿ ಸಿಎಂ ಕೇಜ್ರಿವಾಲ್

ಪಂಜಾಬ್​ನಲ್ಲಿ ಆಮ್​​ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡಿದರೆ, 18 ವರ್ಷ ತುಂಬಿದ ಎಲ್ಲಾ ಯುವತಿಯರಿಗೂ ಪ್ರತಿ ತಿಂಗಳು 1 ಸಾವಿರ ರೂ. ಸಹಾಯಧನ ನೀಡುವುದಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಮೊಗಾ: ಪಂಜಾಬ್​ನಲ್ಲಿ ಆಮ್​​ ಆದ್ಮಿ ಪಕ್ಷ ಸರ್ಕಾರ ರಚನೆ ಮಾಡಿದರೆ, 18 ವರ್ಷ ತುಂಬಿದ ಎಲ್ಲಾ ಯುವತಿಯರಿಗೂ ಪ್ರತಿ ತಿಂಗಳು 1 ಸಾವಿರ ರೂ. ಸಹಾಯಧನ ನೀಡುವುದಾಗಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಎರಡು ದಿನಗಳ ಪಂಜಾಬ್​​ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಮೊಗಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. 'ಪಂಜಾಬ್​ನಲ್ಲಿ 2022ರ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಂಜಾಬ್​ ಚುನಾವಣೆಗೋಸ್ಕರ ಈಗಾಗಲೇ 10 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಲಾಗಿದೆ. ಈ ಹಿಂದೆ ಕೂಡ ಇಲ್ಲಿಗೆ ಭೇಟಿ ನೀಡಿದ್ದ ವೇಳೆ ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಪಂಪ್​​ಸೆಟ್, ಮನೆಯ ವಿದ್ಯುತ್​ ಬಿಲ್​​ ಸಂಪೂರ್ಣವಾಗಿ ಮನ್ನಾ' ಮಾಡುವುದಾಗಿ ಕೇಜ್ರಿವಾಲ್​ ತಿಳಿಸಿದ್ದರು.

ಇದೀಗ ಮಹಿಳೆಯರಿಗೋಸ್ಕರ ಈ ಯೋಜನೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಒಂದು ವೇಳೆ ಮನೆಯಲ್ಲಿ ಮೂವರು (ಅತ್ತೆ , ಸೊಸೆ, ಮಗಳು) ಇದ್ದರೆ ಎಲ್ಲರಿಗೂ ಪ್ರತಿ ತಿಂಗಳು ಸಾವಿರ ರೂಪಾಯಿ ನೀಡಲಾಗುತ್ತದೆ. ಇದರಲ್ಲಿ ಪಿಂಚಣಿ ಪಡೆಯುವವರು ಇದ್ದರೆ ಅದರ ಜೊತೆಗೆ ಈ ಹಣವನ್ನೂ ಸಹ ಜಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹಾಗೆ 1 ಕೋಟಿಗೂ ಹೆಚ್ಚು ಮಹಿಳೆಯರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹೇಳಿಕೊಂಡಿದೆ.
 

Related Stories

No stories found.

Advertisement

X
Kannada Prabha
www.kannadaprabha.com