ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರೈಲು ಪ್ರಯಾಣಿಕರಿಗೆ ಐಆರ್‌ಸಿಟಿಸಿಯಿಂದ ಬಿಸಿಬಿಸಿ ಸುದ್ದಿ!

ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಡಿಸೆಂಬರ್ ನಿಂದ ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ತೇಜಸ್ ಮತ್ತು ಗತಿಮಾನ್ ರೈಲುಗಳ ಪ್ರಯಾಣಿಕರಿಗೆ ಬಿಸಿಬಿಸಿ...

ನವದೆಹಲಿ: ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಡಿಸೆಂಬರ್ ನಿಂದ ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ತೇಜಸ್ ಮತ್ತು ಗತಿಮಾನ್ ರೈಲುಗಳ ಪ್ರಯಾಣಿಕರಿಗೆ ಬಿಸಿಬಿಸಿ ಊಟದ ಸೌಲಭ್ಯವನ್ನು ಐಆರ್‌ ಸಿಟಿಸಿ ಒದಗಿಸಲಿದೆ.

ಕಳೆದ ಒಂದೂವರೆ ವರ್ಷಗಳಿಂದ ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಕೆಟರಿಂಗ್ ಸೇವೆಗಳನ್ನು ನಿಲ್ಲಿಸಲಾಗಿತ್ತು. 50 ರೈಲುಗಳಲ್ಲಿ ಈ ಸೌಲಭ್ಯವನ್ನು ಪುನರ್ ಆರಂಭಿಸುವುದಾಗಿ ಐಆರ್‌ ಸಿಟಿಸಿ ತಿಳಿಸಿದೆ.

ಡಿಸೆಂಬರ್ 27ರಿಂದ ಕೆಟರಿಂಗ್ ಸೇವೆ ಪುನರ್ ಆರಂಭವಾಗುವುದರಿಂದ ಪ್ರಯಾಣಿಕರು ಮನೆಯಿಂದ ಊಟ ತಯಾರಿಸುವ ಜಂಜಾಟದಿಂದ ಪಾರಾಗಲಿದ್ದಾರೆ. ಐಆರ್‌ಸಿಟಿಸಿಯ ಕೆಟರಿಂಗ್ ಸೇವೆಯಿಂದ ವಿದೇಶಿ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ.

ರಾಜಧಾನಿ ಮತ್ತು ಶತಾಬ್ದಿಯಂತಹ ರೈಲುಗಳಲ್ಲಿ, ಟಿಕೆಟ್ ಬುಕ್ ಮಾಡುವಾಗ್ಲೇ ಆಹಾರಕ್ಕಾಗಿ ಈ ಹಿಂದೆ ಹಣ ಪಾವತಿ ಮಾಡಬೇಕಿತ್ತು. ಆದ್ರೆ, ಕೊರೋನಾ ಬಿಕ್ಕಟ್ಟಿನ ವೇಳೆ ಈ ಸೌಲಭ್ಯವನ್ನು ಕೈಬಿಡಲಾಗಿತ್ತು. ಸದ್ಯ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿರುವ ಐಆರ್‌ ಸಿಟಿಸಿ, ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ರೈಲಿನಲ್ಲೇ ಬೇಯಿಸಿದ ಆಹಾರ ಖರೀದಿಸುವ ಸೇವೆ ಪಡೆಯಲಿದ್ದಾರೆ. ಆದರೆ ಇದಕ್ಕಾಗಿ ಪ್ರಯಾಣಿಕ, ಆಹಾರದ ವೆಚ್ಚದ ಜೊತೆಗೆ ಪ್ರತ್ಯೇಕವಾಗಿ 50 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ.

Related Stories

No stories found.

Advertisement

X
Kannada Prabha
www.kannadaprabha.com