ಭಯಾನಕ ದೃಶ್ಯ: ವಿಡಿಯೋ ಮಾಡುವಾಗ ರೈಲಿಗೆ ಸಿಲುಕಿ ಯುವಕ ಸಾವು, ವಿಡಿಯೋ ವೈರಲ್!
ಕೆಲವೊಮ್ಮೆ ನಮ್ಮ ಹವ್ಯಾಸಗಳೇ ನಮ್ಮ ಜೀವಕ್ಕೆ ಕುತ್ತು ತರುತ್ತವೆ ಎಂಬುದು ಎಷ್ಟು ಸತ್ಯವೆಂದರೇ, ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಭಾನುವಾರ ಇಟಾರ್ಸಿಯ ಯುವಕನೊಬ್ಬ ರೈಲ್ವೆ ಹಳಿ ಬಳಿ ವಿಡಿಯೋ ಮಾಡುತ್ತಿರುವಾಗ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ.
Published: 22nd November 2021 07:46 PM | Last Updated: 22nd November 2021 07:46 PM | A+A A-

ಅಪಘಾತದ ದೃಶ್ಯ
ಹೋಶಂಗಾಬಾದ್: ಕೆಲವೊಮ್ಮೆ ನಮ್ಮ ಹವ್ಯಾಸಗಳೇ ನಮ್ಮ ಜೀವಕ್ಕೆ ಕುತ್ತು ತರುತ್ತವೆ ಎಂಬುದು ಎಷ್ಟು ಸತ್ಯವೆಂದರೇ, ಮಧ್ಯಪ್ರದೇಶದ ಹೋಶಂಗಾಬಾದ್ ನಲ್ಲಿ ಭಾನುವಾರ ಇಟಾರ್ಸಿಯ ಯುವಕನೊಬ್ಬ ರೈಲ್ವೆ ಹಳಿ ಬಳಿ ವಿಡಿಯೋ ಮಾಡುತ್ತಿರುವಾಗ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ.
ಇದೀಗ ಯುವಕನಿಗೆ ರೈಲು ಡಿಕ್ಕಿ ಹೊಡೆಯುವ ವಿಡಿಯೋ ವೈರಲ್ ಆಗುತ್ತಿದೆ. ಸಂಜು ಚೌರೆ ಎಂಬ 22 ವರ್ಷದ ಯುವಕ ತನ್ನ ಸ್ನೇಹಿತನೊಂದಿಗೆ ಇಟಾರ್ಸಿಯ ಶರದ್ದೇವರ ದೇವಾಲಯಕ್ಕೆ ಬಂದಿದ್ದನು. ಪಂಜ್ರ ಕಲೆಯಿಂದ ಶರದ್ದೇವರ ದೇಗುಲಕ್ಕೆ ತೆರಳಿದ ಬಳಿಕ ರೈಲ್ವೆ ಹಳಿ ಬಳಿ ಇಬ್ಬರೂ ಯುವಕರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ರೈಲಿಗೆ ಸಿಲುಕಿ ಸಂಜು ಸಾವಿಗೀಡಾಗಿದ್ದಾನೆ.
ಇಟಾರ್ಸಿಯ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಲು ಸಲುವಾಗಿ ರೈಲ್ವೆ ಹಳಿ ಬಳಿ ವಿಡಿಯೋ ಮಾಡುತ್ತಿರುವಾಗ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. @XpressBengaluru #TrainAccident #Madhyapradesh #VideoCraze pic.twitter.com/QxJlGg4kll
— kannadaprabha (@KannadaPrabha) November 22, 2021
ಸೋಮವಾರ ಬೆಳಗ್ಗೆ ಶವದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮೃತ ಸಂಜು ಚೌರೆ ಅವರ ಸ್ನೇಹಿತನನ್ನು ಪತ್ರೋಟಾ ಪೊಲೀಸ್ ಠಾಣೆ ಪ್ರಭಾರಿ ನಾಗೇಶ್ ವರ್ಮಾ ವಿಚಾರಣೆ ನಡೆಸಿ, ಹೇಳಿಕೆ ಪಡೆದಿದ್ದಾರೆ.