ಮೇಘಾಲಯ: ಹೊಸ ಉಗ್ರಗಾಮಿ ಸಂಘಟನೆಯ 11 ಜನರ ಬಂಧನ

ಹೊಸದಾಗಿ ಸ್ಥಾಪನೆಯಾಗಿದ್ದ ಉಗ್ರಗಾಮಿ ಸಂಘಟನೆಯ 11 ಸದಸ್ಯರನ್ನು ಮೇಘಾಲಯದ ಪೊಲೀಸರು ವೆಸ್ಟ್‌ ಗಾರೊ ಹಿಲ್ಸ್‌ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತುರಾ: ಹೊಸದಾಗಿ ಸ್ಥಾಪನೆಯಾಗಿದ್ದ ಉಗ್ರಗಾಮಿ ಸಂಘಟನೆಯ 11 ಸದಸ್ಯರನ್ನು ಮೇಘಾಲಯದ ಪೊಲೀಸರು ವೆಸ್ಟ್‌ ಗಾರೊ ಹಿಲ್ಸ್‌ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. 

ಅಚಿಕ್ ನ್ಯಾಷನಲ್ ಸೋಷಿಯಲಿಸ್ಟ್‌ ಕೌನ್ಸಿಲ್‌ ಹೆಸರಿನ ಈ ಸಂಘಟನೆಯ ಸ್ವಘೋಷಿತ ನಾಯಕ ಚೆಕಂ ಸಂಗ್ಮಾ ಎಂಬಾತನನ್ನು ಜಿಲ್ಲೆಯ ಹವಾಖಾನಾ ಎಂಬಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

ಸೆ.25ರಂದು ಈತನನ್ನು ಬಂಧಿಸಲಾಗಿತ್ತು. ತನಿಖೆಯಲ್ಲಿ ತಾನು ಸಮಾನ ಮನಸ್ಕರ 30 ಜನರ ಜೊತೆಗೂಡಿ ಹೊಸ ಸಂಘಟನೆ ಸ್ಥಾಪಿಸಿರುವುದಾಗಿ ತಿಳಿಸಿದ್ದ  ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಸಿಂಗ್ ಹೇಳಿಕೆ ನೀಡಿದ್ದಾರೆ. 

ಮಾಹಿತಿ ಆಧರಿಸಿ ಇತರರ ಬಂಧಿಸಲಾಯಿತು. ಇವರಿಂದ ಎರಡು ಗನ್‌, ಒಂದು ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಅಪಹರಣ, ಸುಲಿಗೆ ಇತ್ಯಾದಿ ಕೃತ್ಯ ಎಸಗಲು ಹೊಂಚುಹಾಕಿದ್ದು, ಪೂರಕವಾಗಿ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲಿ ತೊಡಗಿತ್ತು ಎಂದು ತಿಳಿಸಿದರು.

ಕಳೆದ ಕೆಲವು ದಿನಗಳಲ್ಲಿ 10 ಮಂದಿಯನ್ನು  ಬಂಧಿಸಲಾಗಿದೆ ಮತ್ತು ಅವರ ಬಳಿಯಿಂದ ಎರಡು ಬಂದೂಕುಗಳು ಮತ್ತು ಒಂದು ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದರು.

ಬಂಧಿತರಲ್ಲಿ ಅನೇಕರು ಈ ಹಿಂದೆ ಗರೋ ಹಿಲ್ಸ್ ಬೆಟ್ಟ ಪ್ರದೇಶದಲ್ಲಿ (ಪಶ್ಚಿಮ ಮೇಘಾಲಯದ ಐದು ಜಿಲ್ಲೆಗಳನ್ನು ಒಳಗೊಂಡಿರುವ) ವಿವಿಧ ಉಗ್ರಗಾಮಿ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದರು ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com