ಡಿ-ಕಂಪನಿ ಡ್ರಗ್ ಗಳಿಗೆ ಬಾಲಿವುಡ್ ತಾರೆಯರೇ ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರು!
ಮುಂಬೈ: ಮುಂಬೈ ನ ಡ್ರಗ್ ಚಟುವಟಿಗಳಿಗೆ ಆಧಾರವಾಗಿರುವುದು ಡಿ-ಕಂಪನಿ ಎಂಬುದು ರಹಸ್ಯವಾಗೇನು ಉಳಿದಿಲ್ಲ ಹಾಗೂ ಬಾಲಿವುಡ್ ನ ಅನೇಕ ತಾರೆಗಳು ಅತಿ ಹೆಚ್ಚು ಪಾವತಿ ಮಾಡುವ ಗ್ರಾಹಕರಾಗಿದ್ದಾರೆ. ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ನೇತೃತ್ವದ್ದಾಗಿದ್ದು, ಪಾಕಿಸ್ತಾನದಲ್ಲಿ ಈ ಉದ್ಯಮದ ಕೇಂದ್ರವಿದೆ ಎಂದು ಹೇಳಲಾಗಿದೆ.
ಡಿ ಕಂಪನಿ ಕಚ್ಚಾ ಡ್ರಗ್ಸ್- ಓಪಿಯಮ್, ಕೋಕಾಗಳನ್ನು ಅಫ್ಘಾನಿಸ್ತಾನ ಹಾಗೂ ಕಾಂಬೋಡಿಯಾದಿಂದ ಖರೀದಿಸಿ ಅದನ್ನ ಹೆರಾಯಿನ್, ಬ್ರೌನ್ ಶುಗರ್, ಚರಾಸ್ ಹಾಗೂ ಕೊಕೇನ್ ಗಳನ್ನಾಗಿ ಸಂಸ್ಕರಿಸಿ ಅದನ್ನು ಭಾರತಕ್ಕೆ ಪಂಜಾಬ್ ಗಡಿ ಹಾಗೂ ಗುಜರಾತ್ ಬಂದರಿನ ಮೂಲಕ ಮುಂಬೈ ಗೆ ತಲುಪಿಸುವ ಕೆಲಸ ಮಾಡುತ್ತದೆ ಎಂದು ಎ ಎನ್ ಸಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈ ಗೆ ಡ್ರಗ್ಸ್ ಬಂದ ತಕ್ಷಣ ಅಲ್ಲಿಂದ ಮುಖ್ಯ ಡೀಲರ್ ಗಳಿಗೆ ತಲುಪಿಸಲಿದ್ದಾರೆ, ಸಬ್ ಡೀಲರ್ ಡೀಲರ್ ಹಾಗೂ ಇತರ ಸ್ಥಳೀಯ ಪೂರೈಕೆದಾರರಿಂದ ಜನರ ಕೈಗೆ ತಲುಪಲಿದೆ
ಕಾಲೇಜು ವಿದ್ಯಾರ್ಥಿಗಳು ಬಹುತೇಕ ಗಾಂಜಾ ಹಾಗೂ ಚರಾಸ್ ಗಳನ್ನು ತೆಗೆದುಕೊಳ್ಳುತ್ತಾರೆ. ಹೆರಾಯಿನ್ ಹಾಗೂ ಕೊಕೇನ್ ನ್ನು ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಶ್ರೀಮಂತರು ಮಾತ್ರ ಇವುಗಳನ್ನು ಖರೀದಿಸುತ್ತಾರೆ. ಬಾಲಿವುಡ್ ನಲ್ಲಿ ಡ್ರಗ್ಸ್ ಸೇವಿಸುವ ಬಹುತೇಕ ಮಂದಿ ಹೆರಾಯಿನ್ ಅಥವಾ ಕೊಕೇನ್ ನ್ನು ಖರೀದಿಸುತ್ತಾರೆ ಎನ್ನುತ್ತಾರೆ ಎಎನ್ ಸಿಯ ಅಧಿಕಾರಿ.
ಎಂಡಿಎಂಎ ಲೈಂಗಿಕ ಉತ್ಸಾಹದ ಮೇಲಿನ ಅದರ ಪರಿಣಾಮಗಳಿಂದಾಗಿ ಹೆಚ್ಚಿನ ಬೇಡಿಕೆ ಹೊಂದಿದೆ ಎಂದು ನ್ಯಾಕ್ರೋಟಿಕ್ಸ್ ನಿಗ್ರಹ ಸೆಲ್ ನ ಉನ್ನತ ಮೂಲಗಳು ತಿಳಿಸಿವೆ. ಈ ಎಂಡಿಎಂಎ ನಿಂದ ಸ್ಲಿಮ್ ಹಾಗೂ ಫಿಟ್ ಆಗಿರುವುದು ಸಾಧ್ಯವಾದ್ದರಿಂದ ಬಾಲಿವುಡ್ ನ ಮಹಿಳಾ ಕಲಾವಿದರು ಗಳು ಹೆಚ್ಚು ಬಳಕೆ ಮಾಡುತ್ತಾರೆ ಎನ್ನುತ್ತಿವೆ ನ್ಯಾಕ್ರೋಟಿಕ್ಸ್ ನಿಗ್ರಹ ಸೆಲ್ ನ ಉನ್ನತ ಮೂಲಗಳು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ