ಆರ್ ಎಸ್ಎಸ್ ಅನ್ನು ನಕ್ಸಲರಿಗೆ ಹೋಲಿಸಿದ ಛತ್ತೀಸ್‌ಗಢ ಸಿಎಂ, ನಾಗಪುರದಿಂದ ಸ್ಥಳೀಯ ಕಾರ್ಯಕರ್ತರ ನಿಯಂತ್ರಣ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವನ್ನು ನಕ್ಸಲರಿಗೆ ಹೋಲಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಸ್ಥಳೀಯ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನಾಗಪುರದಿಂದ....
ಭೂಪೇಶ್ ಬಘೇಲ್
ಭೂಪೇಶ್ ಬಘೇಲ್

ರಾಯಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ವನ್ನು ನಕ್ಸಲರಿಗೆ ಹೋಲಿಸಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು, ಸ್ಥಳೀಯ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನಾಗಪುರದಿಂದ ನಿಯಂತ್ರಿಸಲಾಗುತ್ತಿದೆ ಎಂದು ಬುಧವಾರ ಆರೋಪಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಕಾರ್ಯಕರ್ತರು ಇತರ ರಾಜ್ಯಗಳಲ್ಲಿ ಕುಳಿತಿದ್ದ ತಮ್ಮ ಹಿರಿಯರಿಂದ ನಿರ್ದೇಶಿಸಲ್ಪಟ್ಟಿದ್ದಾರೆ ಎಂದು ಛತ್ತೀಸ್ ಗಢ ಸಿಎಂ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಇಲ್ಲಿನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಘೇಲ್, ದೇಶದಲ್ಲಿ ಕಲ್ಲಿದ್ದಲು ಕೊರತೆಯಿಲ್ಲ ಎಂದು ಹೇಳಿದ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಮತ್ತು ಸಮಸ್ಯೆಯನ್ನು ನಿಭಾಯಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದರು.

ಕಳೆದ ವಾರ ನಡೆದ ಕಾವರ್ಧಾ ಹಿಂಸಾಚಾರ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಲಿದೆ. 15 ವರ್ಷಗಳ ಅವಧಿಯಲ್ಲಿ(2003 ರಿಂದ 2018 ರವರೆಗಿನ ಬಿಜೆಪಿ ಆಡಳಿತದ ಅವಧಿಯಲ್ಲಿ) ಆರ್‌ಎಸ್‌ಎಸ್ ಜನರು ಯಾವುದೇ ಕೆಲಸಗಳನ್ನು ಮಾಡಿಲ್ಲ. ಜನರನ್ನು ಜೀತದಾಳುಗಳಾಗಿ ಮುಂದುವರಿಸಿದರು" ಎಂದು ಬಘೇಲ್ ಹೇಳಿದರು.

ಛತ್ತೀಸ್ ಗಢ ಸಿಎಂ ಹೇಳಿಕೆ "ಉಗ್ರರ ಭಾಷೆ" ಎಂದು ವಿವರಿಸಿದ ಬಿಜೆಪಿ, ಕಾಂಗ್ರೆಸ್ ಮಹಾತ್ಮ ಗಾಂಧಿಯವರ ಸಿದ್ಧಾಂತದಿಂದ ವಿಮುಖವಾಗಿದೆ ಎಂದು ಬಘೇಲ್‌ ಹೇಳಿಕೆಗೆ ತಿರುಗೇಟು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com