ಸಿಂಘು ಗಡಿಯಲ್ಲಿ ರೈತನ ಹತ್ಯೆ ಪ್ರಕರಣ: ಎಫ್ಐಆರ್ ದಾಖಲಿಸಿದ ಪೊಲೀಸರು, ಮೃತನ ವಿವರ ಪತ್ತೆ!

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಿಂಘು ಗಡಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಸಿಂಘುಗಡಿ ಬರ್ಬರ ಹತ್ಯೆ ಪ್ರಕರಣ
ಸಿಂಘುಗಡಿ ಬರ್ಬರ ಹತ್ಯೆ ಪ್ರಕರಣ

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಿಂಘು ಗಡಿಯಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣ ಪೊಲೀಸರು ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಹರ್ಯಾಣ ಡಿಎಸ್ ಪಿ ಹನ್ಸರಾಜ್ ಅವರು, ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ನಾವು ಮೃತದೇಹವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು. ಬಳಿಕ ರೋಹ್ಟಕ್ ರೇಂಜ್ ನ ಐಜಿಪಿ ಸಂದೀಪ್ ಖಿರ್ವಾರ್ ಅವರು ಮಾತನಾಡಿ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದೇವೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಹೇಳಿದರು.

ಮೃತನ ವಿವರ ಪತ್ತೆ!
ಇನ್ನು ಭೀಕರವಾಗಿ ಹತ್ಯೆಗೀಡಾದ ವ್ಯಕ್ತಿಯ ವಿವರವನ್ನೂ ಕೂಡ ಪೊಲೀಸರು ಪತ್ತೆ ಮಾಡಿದ್ದು, ಮೃತ ವ್ಯಕ್ತಿಯನ್ನು 36 ವರ್ಷದ ಲಖ್ ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಪಂಜಾಬ್ ನ ಟಮ್ ಟರನ್ ಜಿಲ್ಲೆಯ ನಿವಾಸಿಯಾಗಿದ್ದು, ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಈತನ ಪೋಷಕರು ತೀರಿಕೊಂಡಿದ್ದರಿಂದ ದಂಪತಿಗಳಿಬ್ಬರು ಈತನನ್ನು ದತ್ತು ಪಡೆದು ಬೆಳೆಸಿದ್ದರು. ಆತ ಕೃಷಿ ಭೂಮಿಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಈತನಿಗೆ ತಂಗಿ, ಪತ್ನಿ ಮತ್ತು ಮೂರು ಹೆಣ್ಣುಮಕ್ಕಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಹಿಂದೆ ನಿಹಂಗ್ ಸಿಖ್ಖರ ಕೈವಾಡ ಶಂಕೆ
ಇನ್ನು ಈ ಭೀಕರ ಕೊಲೆಯ ಹಿಂದೆ ಪಂಜಾಬ್ ನ ನಿಹಾಂಗ್ ಸಿಖ್ಖರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ತಮ್ಮ ಶಸ್ತ್ರಾಸ್ತ್ರ ಸಹಿತ ವೇಷಭೂಷಣಗಳಿಂದಲೇ ಖ್ಯಾತಿಗಳಿಸಿರುವ ನಿಹಂಗ್ ಸಿಖ್ಖ್ ಸಮುದಾಯ ಇದೀಗ ಮತ್ತೊಮ್ಮೆ ತಮ್ಮ ಕ್ರೂರತನದಿಂದ ಕುಖ್ಯಾತಿ ಪಡೆಯುತ್ತಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ವಿಡಿಯೋಗಳ ಅನ್ವಯ ಈ ಕೊಲೆಯಾದಾಗ ಘಟನಾ ಪ್ರದೇಶದಲ್ಲಿದ್ದ ಬಹುತೇಕ ಮಂದಿ ನಿಹಂಗ್ ಸಿಖ್ಖ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ಕೂಡ ಈ ವಿಡಿಯೋಗಳ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com