ಕಬಡ್ಡಿ ವಿಡಿಯೋ ವೈರಲ್: ವಿಡಿಯೋ ಮಾಡಿದಾತ 'ರಾವಣ' ಎಂದ ಪ್ರಜ್ಞಾ ಠಾಕೂರ್

ಬಿಜೆಪಿ ನಾಯಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾಳಿ ದೇವಾಲಯದ ಆವರಣದಲ್ಲಿ ಆಡಿದ್ದ  ಕಬಡ್ಡಿ ಆಟದ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಮಾಡಿದಾತನನ್ನು ಪ್ರಜ್ಞಾ ಅವರು ರಾವಣ ಸಂಭೋದಿಸಿದ್ದಾರೆ.
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್
Updated on

ಭೋಪಾಲ್:  ಬಿಜೆಪಿ ನಾಯಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಕಾಳಿ ದೇವಾಲಯದ ಆವರಣದಲ್ಲಿ ಆಡಿದ್ದ  ಕಬಡ್ಡಿ ಆಟದ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಮಾಡಿದಾತನನ್ನು ಪ್ರಜ್ಞಾ ಅವರು ರಾವಣ ಸಂಭೋದಿಸಿದ್ದಾರೆ. 

ಭೋಪಾಲ್ ಸಂಸದೆ ಅನೇಕ ವರ್ಷಗಳನ್ನು ಗಾಲಿ ಕುರ್ಚಿಯ ಮೇಲೆ ಕಳೆದಿದ್ದರು. ಮಲೇಂಗಾವ್ ಸ್ಫೋಟ ಪ್ರಕರಣದಲ್ಲಿ ಠಾಕೂರ್ ಜೈಲುಪಾಲಾಗಿದ್ದರು. ಅನಾರೋಗ್ಯ ಕಾರಣದಿಂದ ಜಾಮೀನು ಪಡೆದುಕೊಂಡಿದ್ದರು. ಆದರೆ, ಇದೀಗ ಪ್ರಜ್ಞಾ ಠಾಕೂರ್ ಅವರು ಕಬಡ್ಡಿ ಆಡಿರುವ ವಿಡಿಯೋ ಹಲವರ ಟೀಕೆಗೆ ದಾರಿ ಮಾಡಿಕೊಟ್ಟಿದೆ. 

ಸಿಂಧಿ ಸಮುದಾಯದ ಪ್ರಾಬಲ್ಯವಿರುವ ಭೋಪಾಲ್‌ನ ಸಂತ ನಗರ (ಬೈರಗರ್ಹ್)ದಲ್ಲಿ ಶುಕ್ರವಾರ ರಾತ್ರಿ ನಡೆದ ದಸರಾ ಕಾರ್ಯಕ್ರಮದಲ್ಲಿ ಠಾಕೂರ್ ಪಾಲ್ಗೊಂಡಿದ್ದರು. 

ಕಬಡ್ಡಿ ವಿಡಿಯೋ ವೈರಲ್ ಆಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಜ್ಞಾ ಅವರು, ಎರಡು ದಿನಗಳ ಹಿಂದೆ (ದುರ್ಗಾ ಪಂಡಲ್‌ನಲ್ಲಿ) ಆರತಿ ಮಾಡುವ ಸಲುವಾಗಿ ಹೋಗಿದ್ದೆ, ಮೈದಾನದಲ್ಲಿ ಆಡುತ್ತಿದ್ದ ಕೆಲ ಕ್ರೀಡಾಪಟುಗಳು ನನಗೆ ಕಬಡ್ಡಿ ಆಯೋಜಿಸುವಂತೆ ವಿನಂತಿಸಿದ್ದರು. ಇದರ ಒಂದು ಸಣ್ಣ ವಿಡಿಯೋವನ್ನು ಸೆರೆಹಿಡಿದು ಮಾಧ್ಯಮಗಳಲ್ಲಿ ತೋರಿಸಲಾಗಿದೆ. ಇದರಿಂದ ಕೆಲವರು ಅಸಮಾಧಾನ ಹಾಗೂ ಸಿಟ್ಟಾಗಿದ್ದಾರೆ. ನಿಮ್ಮಲ್ಲಿ ಒಬ್ಬ ರಾವಣನಿದ್ದಾನೆ. ಯಾರೋ ಒಬ್ಬ ದೊಡ್ಡ ಶತ್ರು ಇದ್ದಾನೆ. ನನ್ನ ಶತ್ರುವಲ್ಲ. ಆದರೆ, ಅವರು ನನ್ನನ್ನು ತನ್ನ ಶತ್ರು ಪರಿಗಣಿಸಿದ್ದಾನೆ. ನನಗಂತೂ ಗೊತ್ತಿಲ್ಲ. ಅವರ ಯಾವ ಅಮೂಲ್ಯವಾದ ವಸ್ತುವನ್ನು ನಾನು ಕಸಿದುಕೊಂಡಿದ್ದೀನೋ...ಆದರೆ, ರಾವಣ ಎಲ್ಲಿ ಬೇಕಾದರೂ ಇರಬಹುದು ಎಂದು ಹೇಳಿದ್ದಾರೆ. 

ಯಾರ ಸಂಸ್ಕಾರಗಳು ಹಾಳಾಗಿವೆಯೋ, ಅವರು ಅವುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಅದನ್ನು ಮಾಡದಿದ್ದರೆ, ನಿಮ್ಮ ವೃದ್ಧಾಪ್ಯ ಮತ್ತು ಮುಂದಿನ ಜನ್ಮವೂ ಹಾಳಾಗುತ್ತದೆ. ಏಕೆಂದರೆ ದೇಶಭಕ್ತರು, ಕ್ರಾಂತಿಕಾರಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂತರರೊಡನೆ ಹೋರಾಡಿದ ಯಾರೂ ಬದುಕುಳಿಯಲಿಲ್ಲ. ರಾವಣ, ಕಂಸನೂ ಉಳಿಯಲಿಲ್ಲ ಎಂದು ತಿಳಿಸಿದ್ದಾರೆ. 

ಠಾಕೂರ್ ಬೆನ್ನು ಮೂಳೆ ಸಮಸ್ಯೆ ಅನುಭವಿಸುತ್ತಿದ್ದು ಯಾವಾಗ ಬೇಕಾದರೂ ತೊಂದರೆ ಕೊಡಬಹುದು ಎಂದು ಸಂಸದೆಯ ಸಹೋದರಿ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com