ಎನ್ ಸಿಬಿ ವಿರುದ್ಧ ತನಿಖೆಗೆ ಶಿವಸೇನೆ ಮುಖಂಡನ ಆಗ್ರಹ, ಸುಪ್ರೀಂ ಗೆ ಅರ್ಜಿ; ಆರ್ಯನ್ ಖಾನ್ ಮೂಲಭೂತ ಹಕ್ಕು ರಕ್ಷಿಸಲು ಮನವಿ

ಶಿವಸೇನೆ ಮುಖಂಡರೊಬ್ಬರು ನಾರ್ಕೊಟಿಕ್ಸ್ (ಎನ್ ಸಿಬಿ) ವಿರುದ್ಧ ತನಿಖೆ ನಡೆಸಲು ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಶಿವಸೇನೆ
ಶಿವಸೇನೆ

ಮುಂಬೈ: ಶಿವಸೇನೆ ಮುಖಂಡರೊಬ್ಬರು ನಾರ್ಕೊಟಿಕ್ಸ್ (ಎನ್ ಸಿಬಿ) ವಿರುದ್ಧ ತನಿಖೆ ನಡೆಸಲು ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 

ಮುಂಬೈ ನಲ್ಲಿ ಎನ್ ಸಿಬಿಯ ವ್ಯವಹಾರಗಳು ಹಾಗೂ ಅದರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕೆಂದು ಆಗ್ರಹಿಸಿರುವ ಶಿವಸೇನೆ ಮುಖಂಡ,  ಬಾಲಿವುಡ್ ಸ್ಟಾರ್ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. 

ಮುಂಬೈ ನ ಕ್ರೂಶ್ ಪಾರ್ಟಿಯ ಮೇಲೆ ದಾಳಿ ನಡೆಸಿದ್ದ ಎನ್ ಸಿಬಿ ಅಧಿಕಾರಿಗಳು ಶಾರೂಖ್ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಶಿವಸೇನೆ ಮುಖಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಆರ್ಯನ್ ಖಾನ್ ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಾಬೇಕೆಂದು ಆಗ್ರಹಿಸಿದ್ದಾರೆ.

ಶಿವಸೇನೆಯ ನಾಯಕನ ಈ ನಡೆ ಅಚ್ಚರಿ ಮೂಡಿಸಿದೆ. "ಮುಂಬೈ ನಲ್ಲಿ ಎನ್ ಸಿಬಿಯ ಕೆಟ್ಟ ದ್ವೇಷ ವ್ಯವಹಾರಗಳನ್ನು ತೋರಿಸಲು ಬಯಸುತ್ತೇನೆ. ಎನ್ ಸಿಬಿಯ ಅಧಿಕಾರಿ ವರ್ಗ ಸಿನಿಮಾ ಸೆಲಬ್ರಿಟಿಯ ಒಂದು ವರ್ಗವನ್ನು ಕಳೆದ 2 ವರ್ಷಗಳಿಂದ ಟಾರ್ಗೆಟ್ ಮಾಡುತ್ತಿದೆ. ಎನ್ ಸಿಬಿಯ ವಿರುದ್ಧ ವಿಶೇಷ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು" ಎಂದು ಮುಂಬೈ ಮೂಲದ ಶಿವಸೇನೆ ನಾಯಕ ಕಿಶೋರ್ ತಿವಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com