ಸಂಜಯ್ ಸಿಂಗ್
ಸಂಜಯ್ ಸಿಂಗ್

2022 ಉತ್ತರ ಪ್ರದೇಶ ಚುನಾವಣೆ: ಎಲ್ಲಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧೆ, ಯಾವುದೇ ಮೈತ್ರಿ ಮಾತುಕತೆ ಇಲ್ಲ- ಸಂಜಯ್ ಸಿಂಗ್ 

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 403 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ  ಹಿರಿಯ ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ.
Published on

ಲಖನೌ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 403 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ  ಹಿರಿಯ ಮುಖಂಡ ಸಂಜಯ್ ಸಿಂಗ್ ಹೇಳಿದ್ದಾರೆ. ಇತ್ತೀಚಿಗೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗಿಂತ ಪ್ರಬಲವಾಗಿ ಹೊರಹೊಮ್ಮಿದ ಎಎಪಿ ಒಂದು ಮಿನುಗು ಎಂದು ಪರಿಗಣಿಸುವುದು ತಪ್ಪು ಎಂದಿದ್ದಾರೆ. 

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಇತರ ಪಕ್ಷದೊಂದಿಗೆ ಮೈತ್ರಿಗೆ ಮಾತುಕತೆಯಾಗುತಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸ್ಪಷ್ಟಪಡಿಸಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗಿಂತ ನಮ್ಮ ಪಕ್ಷ ಪ್ರಬಲವಾಗಿದೆ. ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ನಾವು 83 ಪಂಚಾಯಿತಿಗಳಲ್ಲಿ ಜಯಬೇರಿ ಭಾರಿಸಿದ್ದೇವೆ, ಈ ಚುನಾವಣೆಯಲ್ಲಿ ಸುಮಾರು 40 ಲಕ್ಷ ಮತಗಳನ್ನು ಎಎಪಿ ಪಡೆದಿದೆ.  1600 ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದರು ಎಂದು ಉತ್ತರ ಪ್ರದೇಶ ಎಎಪಿ ಉಸ್ತುವಾರಿಯೂ ಆಗಿರುವ ಸಿಂಗ್ ಪಿಟಿಐ ಸಂದರ್ಶನದಲ್ಲಿ ತಿಳಿಸಿದ್ದಾರೆ. 

ಎಲ್ಲಾ 403 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದೇವೆ, ಸದ್ಯ ಯಾವುದೇ ಇತರ ಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿಲ್ಲ, ಉತ್ತರ ಪ್ರದೇಶದಲ್ಲಿ ಪಕ್ಷದ ನೆಲೆಯನ್ನು ಸದೃಢಗೊಳಿಸುವತ್ತ ಗಮನ ಹರಿಸಿದ್ದೇವೆ, ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 1 ಕೋಟಿ ಸದಸ್ಯರನ್ನು ಮಾಡಲಾಗಿದೆ ಎಂದು ಸಿಂಗ್ ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳೊಂದಿಗೆ ಪಕ್ಷದ ಮುಖಂಡರು ಸಭೆ ನಡೆಸುತ್ತಿದ್ದಾರೆ, ಬಿಜೆಪಿ ರಾಷ್ಟ್ರೀಯತೆ, ಎಎಪಿಯ ರಾಷ್ಟ್ರೀಯತೆ ಚುನಾವಣೆಯಲ್ಲಿ ಎಎಪಿಯ ಪ್ರಮುಖ ವಿಷಯವಾಗಲಿದೆ ಎಂದು ಉತ್ತರ ಪ್ರದೇಶದ ಸುಲ್ತಾನ್ ಪುರದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com