ದೆಹಲಿಯಲ್ಲಿ ವಾಯು ಮಾಲೀನ್ಯ ಭೀತಿ: ಈ ವರ್ಷವೂ ಪಟಾಕಿ ಬಳಕೆ, ಮಾರಾಟ ನಿಷೇಧಿಸಿದ ಕೇಜ್ರಿವಾಲ್ ಸರ್ಕಾರ!

ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗಳಿಗೆ ಈ ವರ್ಷವೂ ದೀಪಾವಳಿ ಸಂಭ್ರಮ ದೂರವಾಗಿದ್ದು, ವಾಯುಮಾಲೀನ್ಯ ಹಿನ್ನಲೆಯಲ್ಲಿ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಪಟಾಕಿ ಬಳಕೆ, ಮಾರಾಟಕ್ಕೆ ನಿಷೇಧ ಹೇರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ನಿವಾಸಿಗಳಿಗೆ ಈ ವರ್ಷವೂ ದೀಪಾವಳಿ ಸಂಭ್ರಮ ದೂರವಾಗಿದ್ದು, ವಾಯುಮಾಲೀನ್ಯ ಹಿನ್ನಲೆಯಲ್ಲಿ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಪಟಾಕಿ ಬಳಕೆ, ಮಾರಾಟಕ್ಕೆ ನಿಷೇಧ ಹೇರಿದೆ.

ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ವರ್ಷವೂ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದ ವರ್ಷದಂತೆಯೇ ಈ ವರ್ಷವೂ ಪಟಾಕಿಗಳ ಶೇಖರಣೆ, ಮಾರಾಟ ಹಾಗೂ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ವಾಯು ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಲಾಗಿತ್ತು. ಈ ನಿಷೇಧ ಈ ವರ್ಷವೂ ಮುಂದುವರೆಯಲಿದೆ. ಅಲ್ಲದೆ ಸಂಪೂರ್ಣ ನಿಷೇಧದ ದೃಷ್ಟಿಯಿಂದ ಪಟಾಕಿಗಳನ್ನು ಸಂಗ್ರಹಿಸಬೇಡಿ ಎಂದು ನಾನು ವ್ಯಾಪಾರಿಗಳಿಗೆ ಮನವಿ ಮಾಡುತ್ತೇನೆ ಎಂದು ಕೇಜ್ರಿವಾಲ್ ತಮ್ಮ ಟ್ವೀಟ್ ನಲ್ಲಿ ಮನವಿ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com