ಕೇಂದ್ರದ ಎನ್‌ಸಿಸಿ ಉನ್ನತ ಮಟ್ಟದ ಸಮಿತಿಗೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ, ಆನಂದ್ ಮಹೀಂದ್ರಾ ಆಯ್ಕೆ!

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರನ್ನು ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ)ನ ಸಮಗ್ರ ಪರಿಶೀಲನೆಗಾಗಿ ರಕ್ಷಣಾ ಸಚಿವಾಲಯ ರಚಿಸಿರುವ 15 ಸದಸ್ಯರ ಸಮಿತಿಗೆ ಆಯ್ಕೆ ಮಾಡಲಾಗಿದೆ. 
ಎಂಎಸ್ ಧೋನಿ-ಆನಂದ್ ಮಹೀಂದ್ರಾ
ಎಂಎಸ್ ಧೋನಿ-ಆನಂದ್ ಮಹೀಂದ್ರಾ
Updated on

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರನ್ನು ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್‌ಸಿಸಿ)ನ ಸಮಗ್ರ ಪರಿಶೀಲನೆಗಾಗಿ ರಕ್ಷಣಾ ಸಚಿವಾಲಯ ರಚಿಸಿರುವ 15 ಸದಸ್ಯರ ಸಮಿತಿಗೆ ಆಯ್ಕೆ ಮಾಡಲಾಗಿದೆ. 

ಮಾಜಿ ಶಾಸಕರಾದ ಬೈಜಯಂತ್ ಪಾಂಡ ಅವರ ನೇತೃತ್ವದಲ್ಲಿ ಕರ್ನಲ್(ನಿವೃತ್ತ) ರಾಜವರ್ಧನ್ ಸಿಂಗ್ ರಾಥೋರ್, ರಾಜ್ಯಸಭಾ ಸದಸ್ಯ ವಿನಯ್ ಸಹಸ್ರಬುದ್ಧೆ, ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಉಪಕುಲಪತಿ ನಜ್ಮಾ ಅಖ್ತರ್ ಸೇರಿದ್ದಾರೆ. ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ವಸುಧಾ ಕಾಮತ್, ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕನಿತ್ಕರ್, ಮೇಜರ್ ಜನರಲ್ (ನಿವೃತ್ತ) ಅಲೋಕ್ ರಾಜ್, ಎಸ್‌ಐಎಸ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಿತುರಾಜ್ ಸಿನ್ಹಾ ಮತ್ತು ಡೇಟಾಬುಕ್ ಸಿಇಒ ಆನಂದ್ ಶಾ ಸಹ ಸಮಿತಿಯ ಸದಸ್ಯರಾಗಿದ್ದಾರೆ .

ಭಾರತದ ಟಿ 20 ಕ್ರಿಕೆಟ್ ವಿಶ್ವಕಪ್ ತಂಡಕ್ಕೆ ಮಾರ್ಗದರ್ಶಕರಾಗಿ ನೇಮಕಗೊಂಡ ಕೆಲವು ದಿನಗಳ ನಂತರ ಧೋನಿ ಅವರನ್ನು ಉನ್ನತ ಮಟ್ಟದ ಸಮಿತಿಗೆ ಆಯ್ಕೆಯಾಗಿದ್ದಾರೆ. ಭಾರತದ ಮಾಜಿ ನಾಯಕ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್(ಗೌರವ). ಬದಲಾಗುತ್ತಿರುವ ಕಾಲಘಟ್ಟದಲ್ಲಿ ಇದನ್ನು ಹೆಚ್ಚು ಪ್ರಸ್ತುತವಾಗಿಸಲು ಎನ್ಸಿಸಿಯ ಸಮಗ್ರ ಪರಿಶೀಲನೆಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

'ಸಮಿತಿಯ ನಿಯಮಗಳು, ಎನ್‌ಸಿಸಿ ಕೆಡೆಟ್‌ಗಳನ್ನು ರಾಷ್ಟ್ರ ನಿರ್ಮಾಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿ ಪ್ರಯತ್ನಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಅಧಿಕಾರ ನೀಡುವ ಕ್ರಮಗಳನ್ನು ಸೂಚಿಸಲು ಒದಗಿಸುತ್ತದೆ ಸಚಿವಾಲಯ ಹೇಳಿದೆ.

ಒಟ್ಟಾರೆಯಾಗಿ ಸಂಸ್ಥೆಯ ಸುಧಾರಣೆಗಾಗಿ ಮತ್ತು ಎನ್‌ಸಿಸಿ ಪಠ್ಯಕ್ರಮದಲ್ಲಿ ಸೇರಿಸಲು ಅಂತಾರಾಷ್ಟ್ರೀಯ ಯುವ ಸಂಘಟನೆಗಳ ಉತ್ತಮ ಅಭ್ಯಾಸಗಳನ್ನು ಶಿಫಾರಸು ಮಾಡಲು ಸಮಿತಿಯು ಎನ್‌ಸಿಸಿ ಕೆಡೆಟ್‌ಗಳ ಲಾಭದಾಯಕ ತೊಡಗಿಕೊಳ್ಳುವಿಕೆಗೆ ಕ್ರಮಗಳನ್ನು ಪ್ರಸ್ತಾಪಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವ ನಾಗರಿಕರಲ್ಲಿ ಸ್ವಭಾವ, ಶಿಸ್ತು, ಜಾತ್ಯತೀತ ದೃಷ್ಟಿಕೋನ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ಎನ್‌ಸಿಸಿ ಯು ಸಮವಸ್ತ್ರದಲ್ಲಿರುವ ಅತಿದೊಡ್ಡ ಸಂಸ್ಥೆಯಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದು ಜೀವನದ ಎಲ್ಲಾ ಹಂತಗಳಲ್ಲಿ ನಾಯಕತ್ವ ಗುಣಗಳನ್ನು ಹೊಂದಿರುವ ಸಂಘಟಿತ, ತರಬೇತಿ ಪಡೆದ ಮತ್ತು ಪ್ರೇರೇಪಿತ ಯುವ ಸಮೂಹವನ್ನು ರಚಿಸುವ ಗುರಿಯನ್ನು ಹೊಂದಿದೆ.

1948ರಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಕಾಯ್ದೆಯಡಿ ಎನ್‌ಸಿಸಿ ಅನ್ನು ರಚಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com