ಪುನರ್ ನಿರ್ಮಿತ ಸೆಂಟ್ರಲ್ ವಿಸ್ಟಾದಲ್ಲೇ 2022ರಲ್ಲಿ ಗಣರಾಜ್ಯೋತ್ಸವ ಮೆರವಣಿಗೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಪುನರ್ ನಿರ್ಮಿತ ಸೆಂಟ್ರಲ್ ವಿಸ್ಟಾದಿಂದಲೇ ಗಣರಾಜ್ಯೋತ್ಸವದ ಮೆರವಣಿಗೆ ಆಯೋಜಿಸಲಾಗುತ್ತದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಹರ್ದೀಪ್ ಸಿಂಗ್ ಪುರಿ
ಹರ್ದೀಪ್ ಸಿಂಗ್ ಪುರಿ

ನವದೆಹಲಿ: ಪುನರ್ ನಿರ್ಮಿತ ಸೆಂಟ್ರಲ್ ವಿಸ್ಟಾದಿಂದಲೇ ಗಣರಾಜ್ಯೋತ್ಸವದ ಮೆರವಣಿಗೆ ಆಯೋಜಿಸಲಾಗುತ್ತದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗಿನ ವಿಸ್ತಾರವಾದ ಸೆಂಟ್ರಲ್ ವಿಸ್ಟಾ ಅವೆನ್ಯೂದ ಪುನರಾಭಿವೃದ್ಧಿ ಕಾರ್ಯವು ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು,  ಸೆಂಟ್ರಲ್ ವಿಸ್ಟಾದಿಂದಲೇ ಗಣರಾಜ್ಯೋತ್ಸವದ ಮೆರವಣಿಗೆ ಆಯೋಜಿಸಲಾಗುತ್ತದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದರು.

ಈ ಬಗ್ಗೆ ಸಚಿವರ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, '2022 ರಲ್ಲಿ ಗಣರಾಜ್ಯೋತ್ಸವದ ಮೆರವಣಿಗೆಯನ್ನು ಆಯೋಜಿಸಲು ಯೋಜನೆಯು ಸಮಯಕ್ಕೆ ಸಿದ್ಧವಾಗಲಿದೆ. ಮುಂದಿನ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನವು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ ಎಂದು ಹೇಳಿದರು.

ಕಸ್ತೂರ್ಬಾ ಗಾಂಧಿ ಮಾರ್ಗ ಮತ್ತು ಆಫ್ರಿಕಾ ಅವೆನ್ಯೂದಲ್ಲಿ ರಕ್ಷಣಾ ಸಚಿವಾಲಯ ಮತ್ತು ಸಶಸ್ತ್ರ ಪಡೆಗಳ 7,000 ಕ್ಕೂ ಅಧಿಕ ಉದ್ಯೋಗಿಗಳಿಗಾಗಿ ಎರಡು ಹೊಸ ಬಹುಮಹಡಿ ಸ್ವಾಂಕಿ ಕಚೇರಿ ಸಂಕೀರ್ಣಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ಸೆಂಟ್ರಲ್ ವಿಸ್ತಾ ಅವೆನ್ಯೂದ ಪುನರಾಭಿವೃದ್ಧಿ ಕಾರ್ಯವನ್ನು ಎರಡೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ನಾನು ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಲು ಬಯಸುತ್ತೇನೆ, ಅಲ್ಲಿ ಮುಂದಿನ ವರ್ಷ ಗಣರಾಜ್ಯೋತ್ಸವದ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಇದೇ ವೇಳೆ, 'ರಕ್ಷಣಾ ಸಚಿವಾಲಯದ ಉದ್ಯೋಗಿಗಳಿಗಾಗಿ ಎರಡು ಹೊಸ ಕಚೇರಿ ಸಂಕೀರ್ಣಗಳ ಕುರಿತು ಮಾತನಾಡಿದ ಸಚಿವರು, ಈ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಕೇವಲ 12 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಯೋಜನೆಯು 6.4 ಲಕ್ಷ ವೈಯಕ್ತಿಕ ದಿನಗಳ ಉದ್ಯೋಗವನ್ನು ಸೃಷ್ಟಿಸಿದೆ. ಈ ಎರಡು ಹೊಸ ಕಚೇರಿ ಕಟ್ಟಡಗಳನ್ನು ನಿರ್ಮಿಸಲು ಲೈಟ್ ಗೇಜ್ ಸ್ಟೀಲ್ ಫ್ರೇಮಿಂಗ್ (ಎಲ್ ಜಿ ಎಸ್ ಎಫ್) ತಂತ್ರಜ್ಞಾನವನ್ನು ಬಳಸಲಾಗಿದೆ. ಎಲ್ಜಿಎಸ್ಎಫ್ ತಂತ್ರಜ್ಞಾನದ ಅಡಿಯಲ್ಲಿ, ಅಂತಹ ಕಟ್ಟಡಗಳಿಗೆ ಕನಿಷ್ಠ 24 ತಿಂಗಳ ಕಾಲಾವಧಿ ಇರಬೇಕು, ಆದರೆ ಅದನ್ನು 12 ತಿಂಗಳುಗಳಿಗೆ ಇಳಿಸಲಾಗಿದೆ. 8,782 ಮೆಟ್ರಿಕ್ ಟನ್ ಉಕ್ಕು ಮತ್ತು 7,920 ಮೆಟ್ರಿಕ್ ಟನ್ ಸಿಮೆಂಟ್ ನಿರ್ಮಾಣ ಕೆಲಸಕ್ಕೆ ಬಳಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com