ಹಿಂದಿ, ಪ್ರಾದೇಶಿಕ ಭಾಷೆಗಳಲ್ಲಿ ಎಂಬಿಬಿಎಸ್ ಕೋರ್ಸ್ ಬೋಧನೆಗೆ "ನೋ" ಎಂದ ವೈದ್ಯಕೀಯ ಆಯೋಗ 

ಮಧ್ಯಪ್ರದೇಶ ಸರ್ಕಾರ ವೈದ್ಯಕೀಯ ಕೋರ್ಸ್ (ಎಂಬಿಬಿಎಸ್) ಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬೋಧಿಸುವಕ್ಕೆ ಕ್ರಮ ಕೈಗೊಳ್ಳುವುದರ ಬಗ್ಗೆ ಘೋಷಿಸಿದ್ದರೆ ಬೆನ್ನಲ್ಲೇ ಎನ್ಎಂಸಿ ಈ ರೀಟಿಯ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಿದೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನವದೆಹಲಿ: ಮಧ್ಯಪ್ರದೇಶ ಸರ್ಕಾರ ವೈದ್ಯಕೀಯ ಕೋರ್ಸ್ (ಎಂಬಿಬಿಎಸ್) ಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಬೋಧಿಸುವಕ್ಕೆ ಕ್ರಮ ಕೈಗೊಳ್ಳುವುದರ ಬಗ್ಗೆ ಘೋಷಿಸಿದ್ದರೆ ಬೆನ್ನಲ್ಲೇ ಎನ್ಎಂಸಿ ಈ ರೀಟಿಯ ಯೋಜನೆಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಿದೆ.
 
ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ)  ವೈದ್ಯಕೀಯ ಶಿಕ್ಷಣ ನಿಯಂತ್ರಕವಾಗಿದ್ದು, ತನ್ನ ನಿಯಮಗಳ ಅಡಿಯಲ್ಲಿ ಮಧ್ಯಪ್ರದೇಶ ಸರ್ಕಾರದ ಘೋಷಣೆಯನ್ನು ಮಾನ್ಯ ಮಾಡುವುದಿಲ್ಲ ಹಾಗೂ ಇಂಗ್ಲಿಷ್ ಹೊರತಾಗಿ ಬೇರೆ ಭಾಷೆಗಳಲ್ಲಿ ವೈದ್ಯಕೀಯ ಕೋರ್ಸ್ ಗಳಿಗೆ  ಅನುಮತಿ ನೀಡುವ ತಿದ್ದುಪಡಿ ಮಾಡುವ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿ.

ಮಧ್ಯಪ್ರದೇಶ ಸರ್ಕಾರದ ನಿರ್ಧಾರದ ಬಳಿಕ ವೈದ್ಯಕೀಯ ಕೋರ್ಸ್ ಗಳನ್ನು ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ನೀಡುವ ಇಂಗಿತವನ್ನು ಉತ್ತರ ಪ್ರದೇಶ ಸರ್ಕಾರವೂ ಪ್ರಕಟಿಸಿತ್ತು.

ಸೆ.14 ರಂದು ಹಿಂದಿ ದಿವಸ್ ಅಂಗವಾಗಿ ಮಾತನಾಡಿದ್ದ ಮಧ್ಯಪ್ರದೇಶದ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, ಅರೆವೈದ್ಯಕೀಯ ಕೋರ್ಸ್ ಗಳನ್ನು ಹೊರತುಪಡಿಸಿ ವೈದ್ಯಕೀಯ ಕೋರ್ಸ್ ಗಳನ್ನು ಹಿಂದಿಯಲ್ಲಿ ಪರಿಚಯಿಸುವುದು ಹೇಗೆ ಎಂಬುದನ್ನು ತೀರ್ಮಾನಿಸಲು ಸಮಿತಿ ರಚನೆ ಮಾಡಿರುವುದಾಗಿ ಹೇಳಿದ್ದರು.

ಉತ್ತರ ಪ್ರದೇಶದಲ್ಲಿಯೂ ಇಂತಹದ್ದೇ ಪ್ರಸ್ತಾವನೆಯನ್ನು ಪರಿಗಣಿಸಲಾಗುತ್ತಿದೆ.

ಈ ಬೆಳವಣಿಗೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಎನ್ ಎಂಸಿಯ ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಅರುಣಾ ವಿ ವಾಣಿಕರ್, ಈ ರೀತಿಯ ಪ್ರಸ್ತಾವನೆಯೊಂದಿಗೆ ಯಾವ ರಾಜ್ಯ ಸರ್ಕಾರವೂ ಆಯೋಗವನ್ನು ಸಂಪರ್ಕಿಸಿಲ್ಲ, ಅದು ಕಾರ್ಯಸಾಧುವೂ ಅಲ್ಲ ಎಂದು ಹೇಳಿದ್ದಾರೆ.

ಎಂಬಿಬಿಎಸ್ ನ್ನು ಇಂಗ್ಲೀಷ್ ನಲ್ಲಿ ಹೊರತುಪಡಿಸಿ ಬೇರೆ ಯಾವುದೇ ಭಾಷೆಗಳಲ್ಲಿ ಬೋಧಿಸುವುದಕ್ಕೆ ನಿಯಮಗಳು ಅವಕಾಶ ನೀಡುವುದಿಲ್ಲ, ಈಗಿರುವ ನಿಯಮಗಳನ್ನು ಬದಲಾವಣೆ ಮಾಡುವ ಯೋಜನೆಗಳೂ ಇಲ್ಲ. ಒಂದು ವೇಳೆ ಯಾವುದೇ ರಾಜ್ಯ ಸರ್ಕಾರಗಳು ವೈದ್ಯಕೀಯ ಕೋರ್ಸ್ ಗಳನ್ನು ಹಿಂದಿ ಅಥವಾ ಇನ್ನಿತರ ಭಾಷೆಗಳಲ್ಲಿ ಪರಿಚಯಿಸುವುದಕ್ಕೆ ಯತ್ನಿಸಿದರೂ ಎನ್ಎಂಸಿ ಅದನ್ನು ಮಾನ್ಯ ಮಾಡುವುದಿಲ್ಲ" ಎಂದು ಹೇಳಿದ್ದಾರೆ.

ಆದರೆ ಕೇಂದ್ರ ಶಿಕ್ಷಣ ಸಚಿವಾಲಯದಲ್ಲಿನ ಮೂಲಗಳು ಇದಕ್ಕೆ ತದ್ವಿರುದ್ಧವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲೇಖಿಸಿದ್ದು, ಅದರಲ್ಲಿ ತಾಂತ್ರಿಕ ಶಿಕ್ಷಣ, ವೈದ್ಯಕೀಯ, ಕಾನೂನು, ಇಂಜಿನಿಯರಿಂಗ್  ಸೇರಿದಂತೆ ಎಲ್ಲಾ ಕೋರ್ಸ್ ಗಳನ್ನೂ ಮಾತೃಭಾಷೆಯಲ್ಲಿ ಬೋಧಿಸುವ ಅಂಶಗಳನ್ನೊಳಗೊಂಡಿದೆ ಎಂದು ಹೇಳಿದೆ.

ಉನ್ನತ ಶಿಕ್ಷಣ ಕಾರ್ಯದರ್ಶಿ ಅಮಿತ್ ಖರೆ ನೇತೃತ್ವದಲ್ಲಿ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ಕಳೆದ ವರ್ಷ ಸಲಹೆಗಳನ್ನು ನೀಡಿತ್ತು ಅದರಂತೆ 14 ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಈ ವರ್ಷದಿಂದ 5 ಪ್ರಾದೇಶಿಕ ಭಾಷೆಗಳಲ್ಲಿ ಬಿಟೆಕ್ ಕೋರ್ಸ್ ಗಳನ್ನು ಪ್ರಾರಂಭಿಸಲಾಗುತ್ತಿದೆ.

ಆದರೆ ತಜ್ಞರ ಪ್ರಕಾರ ವೈದ್ಯಕೀಯ ವಿಷಯವನ್ನು ಮಾತೃಭಾಷೆಯಲ್ಲಿ ಕಲಿಸುವುದು ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2016 ರಲ್ಲಿ ಮಧ್ಯಪ್ರದೇಶದ ಅಟಲ್ ಬಿಹಾರಿ ವಾಜಪೇಯಿ ಹಿಂದಿ ವಿವಿ ಇಂಜಿನಿಯರಿಂಗ್ ಹಾಗೂ ಎಂಬಿಬಿಎಸ್ ಕೋರ್ಸ್ ಗಳನ್ನು ಹಿಂದಿಯಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿತ್ತು. ಆದರೆ ವೈದ್ಯಕೀಯ ಪರಿಷತ್ ನಿಂದ ಅನುಮತಿ ಸಿಗದ ಕಾರಣ ವೈದ್ಯಕೀಯ ಕೋರ್ಸ್ ಗಳನ್ನು ಹಿಂದಿಯಲ್ಲಿ ಪ್ರಾರಂಭಿಸಲು ಆಗಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com