ಮಹಿಳೆಯರೊಂದಿಗೆ ಇರುವ ತಿರುಚಿದ ಫೋಟೋ, ಅಪಖ್ಯಾತಿಗೆ ಹೆದರಿ ಮಹಾಂತ್ ನರೇಂದ್ರ ಗಿರಿ ಪ್ರಾಣತ್ಯಾಗ?

ಅಖಿಲ ಭಾರತೀಯ ಅಖಾಡ ಪರಿಷತ್ ನ ಮುಖ್ಯಸ್ಥ ಮಹಾಂತ್ ನರೇಂದ್ರ ಗಿರಿ ಅವರ ಆತ್ಮಹತ್ಯೆ ಪ್ರಕರಣದ ನಿಗೂಢತೆ ತೀವ್ರವಾಗತೊಡಗಿದೆ.
ಮಹಾಂತ್ ನರೇಂದ್ರ ಗಿರಿ
ಮಹಾಂತ್ ನರೇಂದ್ರ ಗಿರಿ
Updated on

ಲಖನೌ: ಅಖಿಲ ಭಾರತೀಯ ಅಖಾಡ ಪರಿಷತ್ ನ ಮುಖ್ಯಸ್ಥ ಮಹಾಂತ್ ನರೇಂದ್ರ ಗಿರಿ ಅವರ ಆತ್ಮಹತ್ಯೆ ಪ್ರಕರಣದ ನಿಗೂಢತೆ ತೀವ್ರವಾಗತೊಡಗಿದೆ.

ನರೇಂದ್ರ ಗಿರಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಕೋಠಡಿಯಲ್ಲಿ ಪತ್ರವನ್ನು ಪೊಲೀಸರು ವಶಕ್ಕೆ ಪಡೆದಿದ್ದು ಅದರಲ್ಲಿ ಹಲವು ಅಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಪತ್ರದಲ್ಲಿ ನರೇಂದ್ರ ಗಿರಿ ಅವರು ತಮ್ಮ ಶಿಷ್ಯ ಆನಂದ ಗಿರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಆತ ತಮ್ಮ ಚಾರಿತ್ರ್ಯವಧೆಗೆ ಯತ್ನಿಸುತ್ತಿದ್ದ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ. 

ಏನಿದು ಚಾರಿತ್ರ್ಯವಧೆ ಯತ್ನ?
ತಮ್ಮ ಸಾವಿಗೆ ಆನಂದಗಿರಿಯೇ ಕಾರಣ ಆತ ತಮ್ಮನ್ನು ಸಾವಿನ ಅಂಚಿಗೆ ದೂಡಿದ್ದಾನೆ ಎಂದು ನರೇಂದ್ರ ಗಿರಿ ಅವರು ಆರೋಪಿಸಿದ್ದು, ಆತನೊಂದಿಗೆ ಆದ್ಯ ತಿವಾರಿ ಹಾಗೂ ಆತನ ಪುತ್ರ ಸಂದೀಪ್ ಕೂಡ ತಮ್ಮ ಸಾವಿಗೆ ಕಾರಣರಾಗಿದ್ದಾರೆ. ಈ ಮೂವರ ವಿರುದ್ಧವೂ ಆಡಳಿತ ಕ್ರಮ ಕೈಗೊಳ್ಳಬೇಕೆಂದು ನರೇಂದ್ರ ಗಿರಿ ಪತ್ರದಲ್ಲಿ ಆಗ್ರಹಿಸಿದ್ದಾರೆ.  

ಪತ್ರಿಕೆಗೆ ದೊರೆತಿರುವ ಪತ್ರದಲ್ಲಿ ಸಂನ್ಯಾಸಿ ನರೇಂದ್ರ ಗಿರಿ ಅವರು, "ನಾನು ಮಹಿಳೆಯರೊಂದಿಗೆ ಇರುವ ರೀತಿಯ ತಿರುಚಿದ ಚಿತ್ರಗಳನ್ನು ಹರಿಯ ಬಿಡಲು ಆನಂದಗಿರಿ ಯೋಜಿಸುತ್ತಿದ್ದ ಎಂಬ ಮಾಹಿತಿ ಹರಿದ್ವಾರದ ಮೂಲಕ ತಿಳಿಯಿತು" ಒಂದು ವೇಳೆ ಈ ರೀತಿಯಾದರೆ ಅಖಾಡ ಪರಿಷತ್ ನ ಮುಖ್ಯಸ್ಥರಾಗಿರುವ ತಮ್ಮ ಗೌರವ, ಘನತೆಗಳಿಗೆ ಚ್ಯುತಿ ಉಂಟಾಗಿ ಚಾರಿತ್ರ್ಯ ವಧೆಯಾಗಲಿದೆ. ಪ್ರಕರಣದ ಸತ್ಯಾಸತ್ಯತೆಗಳು ಆ ನಂತರ ಇತ್ಯರ್ಥವಾಗಬಹುದು ನಾನು ನಿರ್ದೋಷಿ ಎಂಬುದು ತಿಳಿಯುವ ವೇಳೆಗೆ ನನ್ನ ಚಾರಿತ್ರ್ಯಕ್ಕೆ ಸಂಪೂರ್ಣ ಕಳಂಕ ಅಂಟಿಕೊಂಡಿರುತ್ತದೆ. ನನ್ನ ಮನಸ್ಸು ಆನಂದ ಗಿರಿಯ ಕಾರಣದಿಂದಾಗಿ ತೊಂದರೆಗೊಳಗಾಗಿದೆ" ಎಂದು ಪತ್ರದಲ್ಲಿ ಮಹಾಂತ ನರೇಂದ್ರ ಗಿರಿ ಆರೋಪಿಸಿದ್ದಾರೆ.

ಸೆ.13 ರಂದೇ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದ್ದೆ. ಆದರೆ ಧೈರ್ಯ ಸಾಲಲಿಲ್ಲ. ಆದರೆ ಇಂದು ನನಗೆ ಸಿಕ್ಕ ಮಾಹಿತಿಯ ಪ್ರಕಾರ ಒಂದು ಅಥವಾ ಎರಡು ದಿನಗಳಲ್ಲಿ ಆನಂದ ಗಿರಿ ನಾನು ಮಹಿಳೆಯರೊಂದಿಗೆ ಇರುವ ತಿರುಚಿದ ಚಿತ್ರಗಳನ್ನು ಹರಿಯಬಿಡುವವನಿದ್ದ ಎಂಬ ಮಾಹಿತಿ ಸ್ಪಷ್ಟವಾಯಿತು. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಬರೆದಿದ್ದಾರೆ.

ನಂತರ ತಮ್ಮ ಮತ್ತೋರ್ವ ಶಿಷ್ಯ ಮಹಾಂತ್ ಬಲ್ಬೀರ್ ಗಿರಿ ಅವರನ್ನು ತಮ್ಮ ಉತ್ತರಧಿಕಾರಿಯನ್ನಾಗಿ ಮಾಡಬೇಕು ಹಾಗೂ ಭಾಗಂಬರಿ ಮಠದ ಮಹಾಂತರನ್ನಾಗಿ ನೇಮಿಸಬೇಕು ಎಂದು ಹೇಳಿದ್ದಾರೆ. ನರೇಂದ್ರ ಗಿರಿ ಅವರು ಸಾವಿಗೂ ಮುನ್ನ ದಾಖಲಿಸಿದ್ದ ವಿಡಿಯೋವನ್ನು, ಕೋಠಡಿಯ ಮುಂದೆ ಇರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com