ಐಪಿಎಲ್ ಡ್ರೀಮ್ ಟೀಮ್ ಸ್ಪರ್ಧೆಯಲ್ಲಿ ಬಿಹಾರದ ಕ್ಷೌರಿಕನಿಗೆ ಜಾಕ್ ಪಾಟ್

ಬಿಹಾರದ ಕ್ಷೌರಿಕನಿಗೆ ಐಪಿಎಲ್ ಡ್ರೀಮ್ ಟೀಮ್ ಸ್ಪರ್ಧೆಯಲ್ಲಿ ಜಾಕ್ ಪಾಟ್ ಹೊಡೆದಿದ್ದು, ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. 
ನಗದು (ಸಾಂಕೇತಿಕ ಚಿತ್ರ)
ನಗದು (ಸಾಂಕೇತಿಕ ಚಿತ್ರ)

ಪಾಟ್ನ: ಬಿಹಾರದ ಕ್ಷೌರಿಕನಿಗೆ ಐಪಿಎಲ್ ಡ್ರೀಮ್ ಟೀಮ್ ಸ್ಪರ್ಧೆಯಲ್ಲಿ ಜಾಕ್ ಪಾಟ್ ಹೊಡೆದಿದ್ದು, ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. 

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದಲ್ಲಿ ಅಶೋಕ್ ಕುಮಾರ್ ಅವರ ಆಟಗಾರರ ಆಯ್ಕೆಗೆ ಈ ಬಹುಮಾನ ಬಂದಿದೆ. 

"ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು ಹಾಗೂ ಅಶೋಕ್ ಕುಮಾರ್ ಅವರ ಆಯ್ಕೆ ನಿಖರವಾಗಿತ್ತು. ಪಂದ್ಯದ ನಂತರ ನಾನು ಮೊದಲ ಸ್ಥಾನದಲ್ಲಿದ್ದೆ ಹಾಗೂ 1 ಕೋಟಿ ರೂಪಾಯಿ ಬಹುಮಾನ ಬಂದಿದೆ". ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.

"ಬಹುಮಾನ ಬಂದಿರುವುದರ ಬಗ್ಗೆ ಅಧಿಕೃತವಾದ ಕರೆಯೂ ಬಂದಿತ್ತು. ತೆರಿಗೆ ಕಡಿತಗೊಳಿಸಿ 70 ಲಕ್ಷ ರೂಪಾಯಿಗಳನ್ನು ಇನ್ನು ಎರಡು ದಿನಗಳಲ್ಲಿ ನನ್ನ ಖಾತೆಗೆ ಹಾಕುವುದಾಗಿ  ಮಾಹಿತಿ ನೀಡಿದ್ದಾರೆ, ಆ ದಿನ ರಾತ್ರಿ ನಿದ್ದೆ ಬರಲಿಲ್ಲ" ಎಂದು ಅಶೋಕ್ ಹೇಳಿದ್ದಾರೆ. 

ಮಧುಬನಿಯಲ್ಲಿ ಅಶೋಕ್ ಸಲೂನ್ ನ್ನು ಹೊಂದಿದ್ದು, ಹಲವು ವರ್ಷಗಳಿಂದ ಡ್ರೀಮ್ ಟೀಮ್ ನಲ್ಲಿ ಭಾಗಿಯಾಗುತ್ತಿದ್ದೆ. ಇದೇ ಮೊದಲ ಬಾರಿಗೆ ಗೆದ್ದಿದ್ದೇನೆ ಎಂದು ಹೇಳಿದ್ದಾರೆ.

50 ರೂಪಾಯಿ ಪ್ರವೇಶ ಶುಲ್ಕ ಪಾವತಿಸಿದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆಯ್ಕೆ ಮಾಡಿದ್ದೆ. ನನ್ನ ವೃತ್ತಿಯನ್ನು ನಾನು ಇಷ್ಟಪಡುತ್ತೇನೆ ಅದನ್ನೇ ಮುಂದುವರೆಸುತ್ತೇನೆ. ಗೆದ್ದ ಹಣದಲ್ಲಿ ಸಾಲವನ್ನು ತೀರಿಸುತ್ತೇನೆ, ನಂತರ ನನ್ನ ಕುಟುಂಬದವರಿಗಾಗಿ ಮನೆ ಕಟ್ಟಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com