ಸೂಕ್ತ ಪ್ರಕ್ರಿಯೆ ಇಲ್ಲದೆಯೆ ಜಮ್ಮುವಿನಲ್ಲಿ ಬಂಧನಕ್ಕೊಳಗಾಗಿರುವ ಮ್ಯಾನ್ಮಾರ್ ರೋಹಿಂಗ್ಯಾಗಳ ಗಡಿಪಾರು ಇಲ್ಲ: ಸುಪ್ರೀಂ

ಜಮ್ಮುವಿನಲ್ಲಿ ಬಂಧನಕ್ಕೊಳಗಾಗಿರುವ ರೋಹಿಂಗ್ಯಾಗಳನ್ನು ಸೂಕ್ತ ಪ್ರಕ್ರಿಯೆ ಇಲ್ಲದೇ ಮ್ಯಾನ್ಮಾರ್ ಗೆ ಗಡಿಪಾರು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಜಮ್ಮುವಿನಲ್ಲಿ ಬಂಧನಕ್ಕೊಳಗಾಗಿರುವ ರೋಹಿಂಗ್ಯಾಗಳನ್ನು ಸೂಕ್ತ ಪ್ರಕ್ರಿಯೆ ಇಲ್ಲದೇ ಮ್ಯಾನ್ಮಾರ್ ಗೆ ಗಡಿಪಾರು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಜಮ್ಮುವಿನಲ್ಲಿ ಬಂಧನಕ್ಕೊಳಗಾಗಿರುವ ರೋಹಿಂಗ್ಯನ್ನರನ್ನು ತಕ್ಷಣವೇ ಬಂಧಮುಕ್ತಗೊಳಿಸಬೇಕು ಅವರನ್ನು ಗಡಿಪಾರು ಮಾಡದಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಎಸ್ಎ ಬೋಬ್ಡೆ ಈ ಆದೇಶ ಹೊರಡಿಸಿದ್ದಾರೆ.

ಈ ಅರ್ಜಿಯನ್ನು ವಿರೋಧಿಸಿದ್ದ ಕೇಂದ್ರ ಸರ್ಕಾರ, ದೇಶ ಅಕ್ರಮ ವಲಸಿಗರಿಗೆ ರಾಜಧಾನಿಯಾಗಿರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿತ್ತು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಪ್ರಶಾಂತ್ ಭೂಷಣ್, ರೋಹಿಂಗ್ಯನ್ನರ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮ್ಯಾನ್ಮಾರ್ ಸೇನೆಯಿಂದ ದುರ್ಬಲಗೊಳಿಸುವಿಕೆ ಮತ್ತು ಲೈಂಗಿಕ ಶೋಷಣೆಗೊಳಗಾಗಿದ್ದಾರೆ. ಮ್ಯಾನ್ಮಾರ್ ನಲ್ಲಿ ಅಂತಾರಾಷ್ಟ್ರೀಯ ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಪಾಲನೆ ಮಾಡುವುದಕ್ಕೆ ವಿಫಲವಾಗಿದೆ ಎಂದು ವಾದಿಸಿದ್ದರು.
 
ಮ್ಯಾನ್ಮಾರ್ ಸೇನೆ ನಡೆಸುತ್ತಿರುವ ಹಿಂಸಾಚಾರ, ದಾಳಿಗಳಿಂದ ರೋಹಿಂಗ್ಯ ಬುಡಕಟ್ಟು ಜನರು ಬಾಂಗ್ಲಾದೇಶ, ಭಾರತಕ್ಕೆ ವಲಸೆ ಬರುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com