ಪ್ರತ್ಯೇಕ ಎನ್‌ಕೌಂಟರ್: ಎಜಿಎಚ್ ಮುಖ್ಯಸ್ಥ ಸೇರಿ 7 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ದೊಡ್ಡ ಯಶಸ್ಸು ಸಾಧಿಸಿದ್ದು ಅನ್ಸಾರ್ ಘಜ್ವಾತ್-ಉಲ್ ಹಿಂದ್(ಎಜಿಎಚ್) ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಸೇರಿದಂತೆ ಏಳು ಉಗ್ರರನ್ನು ಹೊಡೆದುರುಳಿಸಿದೆ.
Published: 09th April 2021 05:02 PM | Last Updated: 09th April 2021 06:27 PM | A+A A-

ಭಾರತೀಯ ಸೇನೆ
ಶ್ರೀನಗರ: ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆ ದೊಡ್ಡ ಯಶಸ್ಸು ಸಾಧಿಸಿದ್ದು ಅನ್ಸಾರ್ ಘಜ್ವಾತ್-ಉಲ್ ಹಿಂದ್(ಎಜಿಎಚ್) ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಸೇರಿದಂತೆ ಏಳು ಉಗ್ರರನ್ನು ಹೊಡೆದುರುಳಿಸಿದೆ.
ಪುಲ್ವಾಮಾ ಮತ್ತು ಶೋಪಿಯಾನ್ ನಲ್ಲಿ ಭಾರತೀಯ ಸೇನೆ ಪ್ರತ್ಯೇಕ ಎನ್‌ಕೌಂಟರ್ ನಡೆಸಿದ್ದು ಶೋಪಿಯಾನ್ ನಲ್ಲಿ ಐವರು ಹಾಗೂ ಪುಲ್ವಾಮಾದಲ್ಲಿ ಇಬ್ಬರನ್ನು ಹೊಡೆದುರುಳಿಸಿದೆ.
ಎನ್‌ಕೌಂಟರ್ ನಲ್ಲಿ ಎಜಿಎಚ್ ಮುಖ್ಯಸ್ಥ ಇಮ್ತಿಯಾಜ್ ಅಹ್ಮದ್ ಶಾ ಸೇರಿದಂತೆ ಏಳು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಲ್ಭಾಗ್ ಸಿಂಗ್ ಹೇಳಿದ್ದಾರೆ.
ಮೊದಲ ಎನ್‌ಕೌಂಟರ್ ನಲ್ಲಿ ಐವರು ಭಯೋತ್ಪಾದಕರು ಮತ್ತು ಎರಡನೇ ಎನ್‌ಕೌಂಟರ್ ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಇದೇ ವೇಳೆ 7 ಎಕೆ ಮತ್ತು 2 ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.