ಭಾರತದ ಅನುಮತಿಯಿಲ್ಲದೇ 'ಕಾರ್ಯಾಚರಣೆ' ನಡೆಸಿದ ಅಮೆರಿಕ ನೌಕಾಪಡೆ, ಜಾಗತಿಕ ಕಾನೂನು ಉಲ್ಲಂಘನೆ
ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’ ನಡೆಸುವ ಮೂಲಕ ಜಾಗತಿಕ ಕಾನೂನು ಉಲ್ಲಂಘಿಸಿದೆ.
Published: 09th April 2021 06:18 PM | Last Updated: 09th April 2021 06:18 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ ‘ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)’ ನಡೆಸುವ ಮೂಲಕ ಜಾಗತಿಕ ಕಾನೂನು ಉಲ್ಲಂಘಿಸಿದೆ.
ಏಪ್ರಿಲ್ 7ರಂದು ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ನೌಕೆಯು ಅಂತಾರಾಷ್ಟ್ರೀಯ ಕಾನೂನಿನಂತೆ ಭಾರತದ ಪೂರ್ವ ಸಮ್ಮತಿಗೆ ಕೋರದೆಯೇ ಭಾರತದ ಇಇಝೆಡ್ ಒಳಗಿನ ಲಕ್ಷದ್ವೀಪದ ಪಶ್ಚಿಮದ 130 ಮೈಲು ದೂರದಲ್ಲಿ ಸ್ವತಂತ್ರ ಕಾರ್ಯಾಚರಣೆ ನಡೆಸಿದೆ' ಎಂದು ಅಮೆರಿಕದ 7 ಫ್ಲೀಟ್ ಪಬ್ಲಿಕ್ ಅಫೇರ್ಸ್ ಅಧಿಕೃತವಾಗಿ ಒಪ್ಪಿಕೊಂಡಿದೆ.
ಭಾರತದ ಕಡಲ ಭದ್ರತಾ ನೀತಿಯನ್ನು ಅಮೆರಿಕದ ನೌಕಾಪಡೆಯ 7 ನೇ ಫ್ಲೀಟ್ ಉಲ್ಲಂಘಿಸಿದ್ದು, ಸ್ವತಂತ್ರ ಸಂಚಾರ ಕಾರ್ಯಾಚರಣೆಯ ಅನುಮತಿಯನ್ನೂ ಪಡೆಯದಿರುವುದು ವಿವಾದ ಸೃಷ್ಟಿಸಿದೆ.
ತನ್ನ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಅಮೆರಿಕ ನೌಕಾಪಡೆ, ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಯೇ ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ಲಕ್ಷದ್ವೀಪದಲ್ಲಿ ಸಂಚರಿಸಿದೆ. ಭಾರತದ ಜಲಗಡಿಯಲ್ಲಿ ಮಿಲಿಟರಿ ವ್ಯಾಯಾಮಗಳಿಗೆ ಮಾತ್ರ ಪೂರ್ವಾನುಮತಿಯ ಅವಶ್ಯಕತೆ ಇದೆ. ಸ್ವತಂತ್ರ ಸಂಚಾರ ಕಾರ್ಯಾಚರಣೆಗಳು ಅಂತಾರಾಷ್ಟ್ರೀಯ ಕಾನೂನಿನಡಿ ಬರುತ್ತವೆ ಎಂದು ಅಮೆರಿಕ ನೌಕಾಪಡೆ ಸ್ಪಷ್ಟಪಡಿಸಿದೆ.