ಕಳೆದ 72 ಗಂಟೆಗಳಲ್ಲಿ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕಾಶ್ಮೀರದಲ್ಲಿ 12 ಉಗ್ರರ ಹತ್ಯೆ: ಜಮ್ಮು-ಕಾಶ್ಮೀರ ಡಿಜಿ ದಿಲ್ಬಾಗ್ ಸಿಂಗ್ 

ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಬಿಜ್ಬೆಹಾರ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆ ಸಿಬ್ಬಂದಿ ಇಬ್ಬರು ಉಗ್ರರನ್ನು ಕೊಂದು ಹಾಕಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಬಿಜ್ಬೆಹಾರ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆ ಸಿಬ್ಬಂದಿ ಇಬ್ಬರು ಉಗ್ರರನ್ನು ಕೊಂದು ಹಾಕಿದ್ದಾರೆ.

ಕಳೆದ ತಡರಾತ್ರಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಉಗ್ರರು ಹತ್ಯೆಯಾಗಿದ್ದು ಸ್ಥಳದಲ್ಲಿ ಇನ್ನೂ ಶೋಧಕಾರ್ಯ ಮುಂದುವರಿದಿದೆ.

ಈ ಇಬ್ಬರು ಉಗ್ರರು ಮೊನ್ನೆ ಶನಿವಾರ ಸೇನಾ ಯೋಧನನ್ನು ಹತ್ಯೆ ಮಾಡಿದವರಾಗಿದ್ದರು. ಅವರನ್ನು ಹತ್ಯೆ ಮಾಡಿದವರನ್ನು ಎರಡು ದಿನಗಳೊಳಗೇ ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ವಲಯ ಐಜಿಪಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ದಿಲ್ಬಾಗ್ ಸಿಂಗ್, ಈ ಇಬ್ಬರು ಉಗ್ರರು ಹಲವು ಸಮಯಗಳಿಂದ ಸಕ್ರಿಯರಾಗಿದ್ದರು. ಹಲವು ಕೇಸುಗಳಲ್ಲಿ ಪೊಲೀಸರಿಗೆ ಬೇಕಾದವರಾಗಿದ್ದರು ಎಂದರು.

ಈ ಮೂಲಕ ಕಣಿವೆ ಪ್ರದೇಶ ಕಾಶ್ಮೀರದಲ್ಲಿ ಕಳೆದ 72 ಗಂಟೆಗಳಲ್ಲಿ ನಾಲ್ಕು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 12 ಉಗ್ರರು ಹತ್ಯೆಯಾಗಿದ್ದಾರೆ. ಅನ್ಸರ್ ಘಜ್ವಾತ್ ಉಲ್ ಹಿಂದ್ ಎಂಬ ಉಗ್ರ ಸಂಘಟನೆಯ ಎಲ್ಲಾ ಸದಸ್ಯರನ್ನು ಹತ್ಯೆಗೈದಂತಾಗಿದೆ.

ಶೋಪಿಯಾನ್‌ನ ಹಡಿಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳಿಂದ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭಯೋತ್ಪಾದಕರು ಮೃತಪಟ್ಟಿದ್ದಾರೆ. ಇದರೊಂದಿಗೆ, ಒಟ್ಟು 12 ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ, ಇದರಲ್ಲಿ ಟ್ರಾಲ್ ಮತ್ತು ಶೋಪಿಯಾನ್‌ನಲ್ಲಿ 7 ಭಯೋತ್ಪಾದಕರು, ಹತಿಪೋರಾ, ಶೋಪಿಯಾನ್‌ನಲ್ಲಿ ಅಲ್ ಬದ್ರ್‌ನ 3 ಭಯೋತ್ಪಾದಕರು ಮತ್ತು ಈಗ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ನೊಂದಿಗೆ ಕೆಲಸ ಮಾಡುತ್ತಿದ್ದ ಬಿಜ್‌ಬಿಹಾರದಲ್ಲಿ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com