ಲಸಿಕೆ ಉತ್ಸವ ಯಶಸ್ವಿಗೊಳಿಸಲು ಪ್ರಧಾನಿ ಮನವಿ

ದೇಶದಲ್ಲಿ ಇಂದಿನಿಂದ ಇದೇ  14 ರವರೆಗೆ  ಲಸಿಕೆ ಉತ್ಸವ ನಡೆಯಲಿದ್ದು ಇದನ್ನು ಯಶಸ್ವಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

Published: 11th April 2021 03:29 PM  |   Last Updated: 11th April 2021 03:29 PM   |  A+A-


PM Modi receives 2nd dose of Covid vaccine at AIIMS, Delhi

ಲಸಿಕೆ ಪಡೆದುಕೊಳ್ಳುತ್ತಿರುವ ಪ್ರಧಾನಿ ಮೋದಿ

Posted By : Srinivas Rao BV
Source : UNI

ನವದೆಹಲಿ: ದೇಶದಲ್ಲಿ ಇಂದಿನಿಂದ ಏ.14 ರವರೆಗೆ  ಲಸಿಕೆ ಉತ್ಸವ ನಡೆಯಲಿದ್ದು ಇದನ್ನು ಯಶಸ್ವಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಎಲ್ಲಾ ರಾಜ್ಯಗಳಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಲು ಪ್ರಧಾನಿ ಮೋದಿ ಅವರು ಕರೆ ಕೊಟ್ಟಿದ್ದಾರೆ. ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡು ಸೋಂಕನ್ನು ನಿಯಂತ್ರಿಸಲು ಮುಂದಾಗಬೇಕು ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನ ಮೋದಿ, ಇಂದಿನಿಂದ, ನಾವೆಲ್ಲರೂ ದೇಶಾದ್ಯಂತ ಲಸಿಕೆ ಉತ್ಸವವನ್ನು ಪ್ರಾರಂಭಿಸುತ್ತಿದ್ದೇವೆ. ಕೋವಿಡ್ ಲಸಿಕೆ ಪಡೆಯಲು ಸಹಾಯ ಮಾಡುವವರಿಗೆ ಸಹಾಯ ಮಾಡಿ, ಕೋವಿಡ್ ಲಸಿಕೆ ಪಡೆಯಲು ಜನರಿಗೆ ಸಹಾಯ ಮಾಡಿ, ಮಾಸ್ಕ್ ಧರಿಸಿ, ಇತರರು ಧರಿಸುವಂತೆ ಪ್ರೇರೇಪಿಸಿ ಎಂದು ಕೊರೊನಾ ವಿರುದ್ಧದ ಹೋರಾಟದ ಈ ಹಂತದಲ್ಲಿ, ದೇಶವಾಸಿಗಳು ವಿಷಯಗಳಿಗೆ ಬದ್ಧರಾಗಿ ಎಂದು ಪ್ರಧಾನಿ  ಮನವಿ ಮಾಡಿದ್ದಾರೆ.
 

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp