ಕುಪ್ವಾರಾದಲ್ಲಿ ಇಬ್ಬರು ಉಗ್ರರು ಸೇರಿ ಐವರ ಬಂಧನ!

ಜಮ್ಮು-ಕಾಶ್ಮೀರದ ಗಡಿ ಜಿಲ್ಲೆಯಾದ  ಕುಪ್ವಾರಾದಲ್ಲಿ ನಡೆದ ಪ್ರತ್ಯೇಕ ಶೋಧ ಕಾರ್ಯಾಚರಣೆಗಳಲ್ಲಿ ಇಬ್ಬರು ಉಗ್ರರು, ಮೂವರು ಶಂಕಿತ ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.
ಉಗ್ರರು
ಉಗ್ರರು

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿ ಜಿಲ್ಲೆಯಾದ  ಕುಪ್ವಾರಾದಲ್ಲಿ ನಡೆದ ಪ್ರತ್ಯೇಕ ಶೋಧ ಕಾರ್ಯಾಚರಣೆಗಳಲ್ಲಿ ಇಬ್ಬರು ಉಗ್ರರು, ಮೂವರು ಶಂಕಿತ ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

ಕುಪ್ವಾರಾದ ಹಂದ್ವಾರದಲ್ಲಿ ಉಗ್ರರು ಅಡಗಿರುವ ಬಗ್ಗೆ ನಿರ್ದಿಷ್ಟ ಸುಳಿವು ಆಧರಿಸಿ ಭದ್ರತಾ ಪಡೆಗಳು ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಈ ವೇಳೆ ಉಗ್ರರಾದ ಸಲೀಂ ಯುಸೂಫ್ ರಾಥರ್ ಮತ್ತು ಇಕ್ಲಾಕ್ ಅಹ್ಮದ್ ಶೇಖ್ ನನ್ನು ಬಂಧಿಸಿದ್ದಾರೆ.

ಶೋಧದ ವೇಳೆ ಶೌಕತ್ ಅಹ್ಮದ್ ಗನಿ, ಮೊಹಮ್ಮದ್ ಯಾಸೀನ್ ರಾಥರ್ ಮತ್ತು ಗುಲಾಮ್ ನಬಿ ರಾಥರ್ ಎಂಬ ಮೂವರು ಸ್ಥಳೀಯ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com