ಜೈಪುರ ಆಸ್ಪತ್ರೆಯಿಂದ 320 ಡೋಸ್ ಕೋವಾಕ್ಸಿನ್ ಲಸಿಕೆ ನಾಪತ್ತೆ: ಪೊಲೀಸ್ ಕೇಸ್ ದಾಖಲು

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 350 ಡೋಸ್ ಕೋವಾಕ್ಸಿನ್ ಲಸಿಕೆ ರಾಜಸ್ಥಾನದ ಜೈಪುರದಲ್ಲಿನ ಸರ್ಕಾರಿ ಆಸ್ಪತ್ರೆಯೊಂದರ ಕೋಲ್ಡ್ ಸ್ಟೋರೇಜ್ ನಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಕೋವಾಕ್ಸಿನ್ ಸಾಂದರ್ಭಿಕ ಚಿತ್ರ
ಕೋವಾಕ್ಸಿನ್ ಸಾಂದರ್ಭಿಕ ಚಿತ್ರ

ಜೈಪುರ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 350 ಡೋಸ್ ಕೋವಾಕ್ಸಿನ್ ಲಸಿಕೆ ರಾಜಸ್ಥಾನದ ಜೈಪುರದಲ್ಲಿನ ಸರ್ಕಾರಿ ಆಸ್ಪತ್ರೆಯೊಂದರ ಕೋಲ್ಡ್ ಸ್ಟೋರೇಜ್ ನಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಶಾಸ್ತ್ರೀ ನಗರದ  ಎಚ್‌ಬಿ ಕನ್ವಾಟಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಭಾನುವಾರ ಪರಿಶೀಲನೆ ನಡೆಸಿದಾಗ  200 ಡೋಸ್ ದಾಸ್ತಾನಿತ್ತು. ನಂತರ ಸೋಮವಾರ 489 ಡೋಸ್ ಸ್ವೀಕರಿಸಲಾಗಿದೆ. ಆದಾಗ್ಯೂ, ಮರು ಪರಿಶೀಲಿಸಿದಾಗ 320 ಡೋಸ್ ಆಸ್ಪತ್ರೆಯಿಂದ ನಾಪತ್ತೆಯಾಗಿರುವುದು ಕಂಡುಬಂದಿದೆ. ಲಸಿಕೆಗಳನ್ನು ಸಂಗ್ರಹಿಸಿದ ಕೋಲ್ಡ್ ಸ್ಟೋರೇಜ್ ಘಟಕದ ಹೊರಗೆ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಲಾಯಿತು.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆ ದೂರು ದಾಖಲಿಸಿದ್ದು, ತನಿಖೆ ಪ್ರಗತಿಯಲ್ಲಿದೆ. ಭದ್ರತಾ ಪಡೆಗಳಿದ್ದರೂ ಹೇಗೆ ಲಸಿಕೆ ನಾಪತ್ತೆಯಾಯಿತು ಎಂಬುದು ಕುತೂಹಲ ಮೂಡಿಸಿದೆ. ಪೊಲೀಸರು ಆಸ್ಪತ್ರೆಯಲ್ಲಿನ ಸಿಸಿಟಿವಿಯನ್ನು ಪರಿಶೀಲಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com