ಸೇನಾ ಮಾಹಿತಿಯನ್ನು ವಿದೇಶಿ ಗುಪ್ತಚರ ಏಜೆನ್ಸಿಗೆ ಸೋರಿಕೆ ಮಾಡಿದ ಪಂಜಾಬ್ ವ್ಯಕ್ತಿ ಬಂಧನ

ಸೇನಾ ಮಾಹಿತಿಯನ್ನು ವಿದೇಶಿ ಗುಪ್ತಚರ ಏಜೆನ್ಸಿಗೆ ನೀಡುತ್ತಿದ್ದ ಪಂಜಾಬ್ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೇನಾ ನಿಯೋಜನೆ ಕುರಿತ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.

Published: 17th April 2021 11:43 PM  |   Last Updated: 17th April 2021 11:43 PM   |  A+A-


Punjabi man arrested for passing sensitive information about Indian Army to foreign intelligence agency

ಸೇನಾ ಮಾಹಿತಿಯನ್ನು ವಿದೇಶಿ ಗುಪ್ತಚರ ಏಜೆನ್ಸಿಗೆ ಸೋರಿಕೆ ಮಾಡಿದ ಪಂಜಾಬ್ ವ್ಯಕ್ತಿ ಬಂಧನ

Posted By : Srinivas Rao BV
Source : The New Indian Express

ನವದೆಹಲಿ: ಸೇನಾ ಮಾಹಿತಿಯನ್ನು ವಿದೇಶಿ ಗುಪ್ತಚರ ಏಜೆನ್ಸಿಗೆ ನೀಡುತ್ತಿದ್ದ ಪಂಜಾಬ್ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೇನಾ ನಿಯೋಜನೆ ಕುರಿತ ಸೂಕ್ಷ್ಮ ಮಾಹಿತಿಯನ್ನು ನೀಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.

ಆರೋಪಿಯನ್ನು ಹರ್ಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ತರ್ನ್ ತರಾನ್ ನ ನಿವಾಸಿಯಾಗಿದ್ದಾನೆಂದು ತಿಳಿದುಬಂದಿದೆ.

"ತೀವ್ರಗಾಮಿ ವ್ಯಕ್ತಿಯೋರ್ವನನ್ನು ಸೇನಾ ಸೂಕ್ಷ್ಮ ಮಾಹಿತಿಗಳನ್ನು ವಿದೇಶಕ್ಕೆ ನೀಡಿದ ಕಾರಣಕ್ಕಾಗಿ ಬಂಧಿಸಲಾಗಿದೆ. ಭಾರತೀಯ ಸೇನಾ ಸಿಬ್ಬಂದಿ, ಸೇನಾ ಚಟುವಟಿಕೆ, ಸೇನಾ ಲೊಕೇಷನ್, ಗಡಿ ಭಾಗದಲ್ಲಿರುವ ಬಿಎಸ್ಎಫ್ ಪೋಸ್ಟ್ ಗಳು, ಬಂಕರ್ ಗಳ ಬಗ್ಗೆ ಮಾಹಿತಿ ರವಾನೆ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಕೃತ್ಯಕ್ಕಾಗಿ ಹವಾಲಾ ಹಣವನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp