ದೇಶದಲ್ಲಿ 92 ದಿನಗಳಲ್ಲಿ ಸುಮಾರು 12 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ- ಕೇಂದ್ರ ಸರ್ಕಾರ

ದೇಶದಲ್ಲಿ ಕೇವಲ 92 ದಿನಗಳಲ್ಲಿ 12 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಈ ರೀತಿ ಅತಿ ವೇಗದಲ್ಲಿ ಲಸಿಕೆ ನೀಡಿದ ರಾಷ್ಟ್ರ ಭಾರತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹೇಳಿದೆ. ಅಮೆರಿಕ 97 ದಿನಗಳನ್ನು ತೆಗೆದುಕೊಂಡರೆ, ಚೀನಾ 108 ದಿನಗಳನ್ನು ತೆಗೆದುಕೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಕೇವಲ 92 ದಿನಗಳಲ್ಲಿ 12 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಈ ರೀತಿ ಅತಿ ವೇಗದಲ್ಲಿ ಲಸಿಕೆ ನೀಡಿದ ರಾಷ್ಟ್ರ ಭಾರತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹೇಳಿದೆ. ಅಮೆರಿಕ 97 ದಿನಗಳನ್ನು ತೆಗೆದುಕೊಂಡರೆ, ಚೀನಾ 108 ದಿನಗಳನ್ನು ತೆಗೆದುಕೊಂಡಿದೆ.

ವಿಶ್ವದ ಅತ್ಯಂತ ದೊಡ್ಡ ಲಸಿಕಾ ಅಭಿಯಾನದ ಭಾಗವಾಗಿ ದೇಶದಲ್ಲಿ 12 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಬೆಳಗ್ಗೆವರೆಗಿನ ತಾತ್ಕಾಲಿಕ ವರದಿ ಪ್ರಕಾರ, 18,15,325 ಸೆಷನ್ಸ್ ಗಳಲ್ಲಿ 12, 26, 22, 590 ಡೋ್ಸ್  ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಮೊದಲ ಡೋಸ್ ಪಡೆದ 91, 28, 146 ಆರೋಗ್ಯ ಕಾರ್ಯಕರ್ತರು, ಎರಡನೇ ಡೋಸ್ ಪಡೆದ 57, 08, 223 ಆರೋಗ್ಯ ಕಾರ್ಯಕರ್ತರನ್ನು ಇದು ಒಳಗೊಂಡಿದೆ. ಅಲ್ಲದೇ,  60 ಕ್ಕಿಂತ ಹೆಚ್ಚು ವಯಸ್ಸಿನ 4,55,94,522 ಫಲಾನುಭವಿಗಳಿಗೆ ಮೊದಲ ಹಾಗೂ 38, 91, 294 ಫಲಾನುಭವಿಗಳಿಗೆ ಎರಡನೇ ಡೋಸ್ ನೀಡಲಾಗಿದೆ.

 45 ರಿಂದ 60 ವರ್ಷದೊಳಗಿನ 4, 04,74,993 ಮತ್ತು 10, 81,759 ಫಲಾನುಭವಿಗಳಿಗೆ ಕ್ರಮವಾಗಿ ಒಂದು ಹಾಗೂ ಎರಡನೇ ಡೋಸ್ ನೀಡಲಾಗಿದೆ. ದೇಶದಲ್ಲಿ ಇದುವರೆಗೆ ನೀಡಲಾದ ಒಟ್ಟು ಪ್ರಮಾಣಗಳಲ್ಲಿ ಶೇಕಡಾ 59.5 ರಷ್ಟು ಎಂಟು ರಾಜ್ಯಗಳ ಪಾಲಾಗಿದೆ.

 ಗುಜರಾತ್ (1,03,37,448), ಮಹಾರಾಷ್ಟ್ರ (1,21,39,453), ರಾಜಸ್ಥಾನ (1,06,98,771) ಮತ್ತು ಯುಪಿ (1,07,12,739)ಯಲ್ಲಿ ಈವರೆಗೆ ತಲಾ 1 ಕೋಟಿಗಿಂತ ಹೆಚ್ಚಿನ ಪ್ರಮಾಣದ ಡೋಸ್ ನೀಡಲಾಗಿದೆ.  ಏಪ್ರಿಲ್ 16 ರಂದು ಗುಜರಾತ್ 1 ಕೋಟಿ ಲಸಿಕೆಗಳನ್ನು ಪೂರ್ಣಗೊಳಿಸಿದರೆ, ಇತರ ಮೂರು ರಾಜ್ಯಗಳು ಏಪ್ರಿಲ್ 14 ರಂದು ಇದನ್ನು ಸಾಧಿಸಿವೆ  ಎಂದು ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com