''ಮಹಾ''ವಿವಾದ: ದೇವೇಂದ್ರ ಫಡ್ನವಿಸ್' ರ 22 ವರ್ಷದ ಸೋದರ ಸಂಬಂಧಿಗೆ ಕೋವಿಡ್-19 ಲಸಿಕೆ! 

ಮಹಾರಾಷ್ಟ್ರದ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರ 22 ವರ್ಷದ ಸೋದರ ಸಂಬಂಧಿಗೆ ಕೋವಿಡ್-19 ಲಸಿಕೆ ನೀಡಿರುವುದು ವಿವಾದಕ್ಕೆ ಗ್ರಾಸವಾಗಿದೆ.
''ಮಹಾ''ವಿವಾದ: ದೇವೇಂದ್ರ ಫಡ್ನವಿಸ್' ರ 22 ವರ್ಷದ ಸೋದರ ಸಂಬಂಧಿಗೆ ಕೋವಿಡ್-19 ಲಸಿಕೆ!
''ಮಹಾ''ವಿವಾದ: ದೇವೇಂದ್ರ ಫಡ್ನವಿಸ್' ರ 22 ವರ್ಷದ ಸೋದರ ಸಂಬಂಧಿಗೆ ಕೋವಿಡ್-19 ಲಸಿಕೆ!

ಮುಂಬೈ: ಮಹಾರಾಷ್ಟ್ರದ ಮಾಜಿ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರ 22 ವರ್ಷದ ಸೋದರ ಸಂಬಂಧಿಗೆ ಕೋವಿಡ್-19 ಲಸಿಕೆ ನೀಡಿರುವುದು ವಿವಾದಕ್ಕೆ ಗ್ರಾಸವಾಗಿದೆ.

ಫಡ್ನವಿಸ್ ಅವರ ಸಂಬಂಧಿ ತನ್ಮಯ್ ಫಡ್ನವಿಸ್ ತಾವು ಕೋವಿಡ್-19 ಲಸಿಕೆ ಪಡೆದುಕೊಳ್ಳುತ್ತಿರುವುದರ ಫೋಟೊ ಹಾಕಿದ್ದರು. ಇದು ವಿವಾದಕ್ಕೆ ಗ್ರಾಸವಾಗಿದೆ.

ವಯಸ್ಸಿನ ಅರ್ಹತೆ ಇಲ್ಲದೇ ಇದ್ದರೂ ಸಹ ತನ್ಮಯ್ ಫಡ್ನವಿಸ್ ಲಸಿಕೆ ಪಡೆದಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗತೊಡಗಿದೆ. 

ಈ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡಿರುವ ಫಡ್ನವಿಸ್ ಅವರ ಕಚೇರಿ, ವಯಸ್ಸಿನ ಅರ್ಹತೆ ಇಲ್ಲದೇ ಇದ್ದರೂ ಲಸಿಕೆ ಪಡೆದಿರುವುದು ತಪ್ಪು ಎಲ್ಲರೂ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದೆ. ನಾಗ್ಪುರದ ರಾಷ್ಟ್ರೀಯ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಲಸಿಕೆ ಪಡೆದ ತನ್ಮಯ್ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. 

ಈ ವಿವಾದದಿಂದ ದೇವೇಂದ್ರ ಫಡ್ನವಿಸ್ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ. "ತನ್ಮಯ್ ಫಡ್ನವಿಸ್ ನನ್ನ ದೂರದ ಸಂಬಂಧಿ, ಆದರೆ ಆತ ವಯಸ್ಸಿನ ಅರ್ಹತೆಯನ್ನು ಉಲ್ಲಂಘನೆ ಮಾಡಿ ಲಸಿಕೆ ಪಡೆದಿರುವುದು ನನ್ನ ಅರಿವಿಗೆ ಬಂದಿಲ್ಲ" ಎಂಬ ಹೇಳಿಕೆಯನ್ನು ದೇವೇಂದ್ರ ಫಡ್ನವೀಸ್ ಅವರ ಕಚೇರಿ ಬಿಡುಗಡೆ ಮಾಡಿದೆ

"ನನ್ನ ಪತ್ನಿ ಅಥವಾ ಮಗು ಈ ವರೆಗೂ ವಯಸ್ಸಿನ ಅರ್ಹತೆಯ ವ್ಯಾಪ್ತಿಯಲ್ಲಿ ಬರದ ಕಾರಣ ಲಸಿಕೆ ಪಡೆದಿಲ್ಲ, ವಯಸ್ಸಿನ ಅರ್ಹತೆ ಇಲ್ಲದೇ ಇದ್ದರೂ ಲಸಿಕೆ ಪಡೆದಿರುವುದು ತಪ್ಪು ಎಲ್ಲರೂ ನಿಯಮಗಳನ್ನು ಪಾಲಿಸಬೇಕು" ಎಂದು ಫಡ್ನವಿಸ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com