ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ವಿಮಾ ಯೋಜನೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿದ ಕೇಂದ್ರ!

ಕಳೆದ ತಿಂಗಳು ಅವಧಿ ಮುಗಿದಿದ್ದು ಮಧ್ಯಂತರ ವ್ಯವಸ್ಥೆಯಾಗಿ ಏಪ್ರಿಲ್ 24ರವರೆಗೆ ವಿಸ್ತರಿಸಲಾಗಿದ್ದ ಕೋವಿಡ್ ವಾರಿಯರ್ಸ್ ಗಳ 50 ಲಕ್ಷ ರೂ. ವಿಮಾ ರಕ್ಷಣೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ.
ಆರೋಗ್ಯ ಕಾರ್ಯಕರ್ತರು
ಆರೋಗ್ಯ ಕಾರ್ಯಕರ್ತರು

ನವದೆಹಲಿ: ಕಳೆದ ತಿಂಗಳು ಅವಧಿ ಮುಗಿದಿದ್ದು ಮಧ್ಯಂತರ ವ್ಯವಸ್ಥೆಯಾಗಿ ಏಪ್ರಿಲ್ 24ರವರೆಗೆ ವಿಸ್ತರಿಸಲಾಗಿದ್ದ ಕೋವಿಡ್ ವಾರಿಯರ್ಸ್ ಗಳ 50 ಲಕ್ಷ ರೂ. ವಿಮಾ ರಕ್ಷಣೆಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ.

ಕಳೆದ ವರ್ಷ ಕೋವಿಡ್ 19 ಪರಿಹಾರ ಪ್ಯಾಕೇಜ್‌ನ ಭಾಗವಾಗಿ ಘೋಷಿಸಿದ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್‌ನಡಿ ಮಾರ್ಚ್ 24ರಂದು ಮುಕ್ತಾಯಗೊಂಡಿತ್ತು. ಇದೀಗ ಈ ಪ್ಯಾಕೇಜ್ ಅನ್ನು ಮುಂದುವರೆಸಿದ್ದು ಸುಮಾರು 22 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತಾ ಬಲ ನೀಡುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್‌ನೊಂದಿಗಿನ ಒಪ್ಪಂದದ ನಂತರ ಇತ್ತೀಚಿನ ವಿಸ್ತರಣೆಯು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಇಲ್ಲಿಯವರೆಗೂ 287 ಕ್ಲೈಮ್‌ಗಳನ್ನು ಈ ಯೋಜನೆಯಡಿ ಇತ್ಯರ್ಥಪಡಿಸಲಾಗಿದೆ.

ಸಾಂಕ್ರಾಮಿಕ ರೋಗದ ಬೃಹತ್ ಎರಡನೇ ಅಲೆ ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಕನಿಷ್ಠ 6 ತಿಂಗಳವರೆಗೆ ವಿಸ್ತರಿಸಬೇಕೆಂದು ಭಾರತೀಯ ವೈದ್ಯಕೀಯ ಸಂಘವು ಆರೋಗ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಮನವಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com