ಮೊದಲನೇ ಅಲೆಯಷ್ಟೇ ತೀವ್ರತೆ, ಜನಸಂಖ್ಯೆಯನ್ನು ಕೊರೋನಾ ಎರಡನೇ ಅಲೆ ಬಾಧಿಸಿದೆ: ಆರೋಗ್ಯ ಸಚಿವಾಲಯ

ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್-19 ನ ಎರಡು ಅಲೆಗಳ ಬಗ್ಗೆ ತುಲನಾತ್ಮಕ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಅಲೆಯ ತೀವ್ರತೆ, ಅದರಿಂದ ಬಾಧಿತರಾಗುತ್ತಿರುವ ಜನಸಂಖ್ಯೆ ಮೊದಲನೆ ಅಲೆಯಂತೆಯೇ ಇದೆ ಎಂದು ಹೇಳಿದೆ. 
ಕೊರೋನಾ ಸೋಂಕು ಪತ್ತೆ ಪರೀಕ್ಷೆ (ಸಂಗ್ರಹ ಚಿತ್ರ)
ಕೊರೋನಾ ಸೋಂಕು ಪತ್ತೆ ಪರೀಕ್ಷೆ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಕೋವಿಡ್-19 ನ ಎರಡು ಅಲೆಗಳ ಬಗ್ಗೆ ತುಲನಾತ್ಮಕ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಎರಡನೇ ಅಲೆಯ ತೀವ್ರತೆ, ಅದರಿಂದ ಬಾಧಿತರಾಗುತ್ತಿರುವ ಜನಸಂಖ್ಯೆ ಮೊದಲನೆ ಅಲೆಯಂತೆಯೇ ಇದೆ ಎಂದು ಹೇಳಿದೆ. 

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, 146 ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕು ಪ್ರಮಾಣ ಶೇ.15 ಕ್ಕಿಂತ ಹೆಚ್ಚಿದ್ದರೆ, 274 ಜಿಲ್ಲೆಗಳಲ್ಲಿ ಶೇ.5-15 ರಷ್ಟಿದೆ ಎಂದು ಹೇಳಿದ್ದಾರೆ. ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ಭೀತಿ ಮೂಡಿಸುತ್ತಿರುವ ನಡುವೆ ಅಂಕಿ-ಅಂಶಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಅಂಕಿ-ಅಂಶಗಳ ಪ್ರಕಾರ, 10 ಕ್ಕಿಂತ ಕಡಿಮೆ ವಯಸ್ಸಿನ ಮಂದಿಯಲ್ಲಿ ಶೇ.4.03 ರಷ್ಟು ಕೋವಿಡ್-19 ಸೋಂಕು ತಗುಲಿತ್ತು. ಎರಡನೇ ಅಲೆಯಲ್ಲಿ ಈ ಪ್ರಮಾಣ 2.97 ರಷ್ಟು ದಾಖಲಾಗಿದೆ. 

10-20 ವಯಸ್ಸಿನವರಲ್ಲಿ ಶೇ.8.07 ರಷ್ಟು ಕೋವಿಡ್-19 ಪ್ರಕರಣಗಳು ಮೊದಲ ಅಲೆಯಲ್ಲಿ ವರದಿಯಾಗಿದ್ದರೆ, ಎರಡನೇ ಅಲೆಯಲ್ಲಿ ಇದೇ ವಯಸ್ಸಿನವರಲ್ಲಿ ಶೇ.8.50 ರಷ್ಟು ಪ್ರಕರಣಗಳು ವರದಿಯಾಗಿವೆ. 20-30 ವಯಸ್ಸಿನವರಲ್ಲಿ ಮೊದಲ ಅಲೆಯಲ್ಲಿ ಶೇ.20.41 ರಷ್ಟು ಸೋಂಕು ಪ್ರಕರಣ ವರದಿಯಾಗಿದ್ದರೆ ಈಗ 19.35 ರಷ್ಟು ಪ್ರಕರಣಗಳು ವರದಿಯಾಗಿವೆ ಎಂದು ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ. 

30 ಹಾಗೂ ಮೇಲ್ಪಟ್ಟ ವಯಸ್ಸಿನವರ ಪೈಕಿ ಶೇ.67.5 ರಷ್ಟು ಮಂದಿಗೆ ಕೋವಿಡ್-19 ಸೋಂಕು ಮೊದಲ ಅಲೆಯಲ್ಲಿ ಪತ್ತೆಯಾಗಿತ್ತು. ಈಗ ಎರಡನೇ ಅಲೆಯಲ್ಲಿ ಇದು ಶೇ.69.18 ರಷ್ಟಕ್ಕೆ ಏರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com