ಪಶ್ಚಿಮ ಬಂಗಾಳ 6ನೇ ಹಂತದ ಚುನಾವಣೆ: ಮಧ್ಯಾಹ್ನದ ವೇಳೆಗೆ ಶೇ.57.30ರಷ್ಟು ಮತದಾನ, ಅಲ್ಲಲ್ಲಿ ಹಿಂಸಾಚಾರ
ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಆರನೇ ಹಂತದ ಮತದಾನ ಗುರುವಾರ ನಡೆಯುತ್ತಿದ್ದು, ಮಧ್ಯಾಹ್ನ 1.28ರ ವೇಳೆಗೆ ಶೇಕಡಾ 57.30ರಷ್ಟು ಮತದಾನವಾಗಿದೆ.
Published: 22nd April 2021 01:40 PM | Last Updated: 22nd April 2021 01:46 PM | A+A A-

ನಾರ್ತ್ 24 ಪರ್ಗಾನ ಜಿಲ್ಲೆಯಲ್ಲಿ ಮತದಾನಕ್ಕೆ ಸರದಿಯಲ್ಲಿ ನಿಂತಿರುವ ಮತದಾರರು
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಆರನೇ ಹಂತದ ಮತದಾನ ಗುರುವಾರ ನಡೆಯುತ್ತಿದ್ದು, ಮಧ್ಯಾಹ್ನ 1.28ರ ವೇಳೆಗೆ ಶೇಕಡಾ 57.30ರಷ್ಟು ಮತದಾನವಾಗಿದೆ.
ಉತ್ತರ ದಿನಜ್ ಪುರ್ ಚೋಪ್ರಾ ಪ್ರದೇಶದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮತಗಟ್ಟೆ ಬಳಿ ಏಜೆಂಟ್ ವೊಬ್ಬರು ನಿಂದನೆ ಮಾಡಿದ್ದಾರೆ ಎಂಬ ವಿಷಯಕ್ಕೆ ಘರ್ಷಣೆಯುಂಟಾಗಿ ಗುಂಡಿನ ದಾಳಿ ನಡೆದಿದೆ. ನಾರ್ತ್ 24 ಪರಗಾನದ ಬೂತ್ ಸಂಖ್ಯೆ 131-132ರಲ್ಲಿ ಭದ್ರತೆ ಕಣ್ಗಾವಲಿಗೆ ಡ್ರೋನ್ ಕಣ್ಗಾವಲು ನಡೆಯುತ್ತಿದೆ.
ನಾರ್ತ್ 24 ಪರ್ಗಾನ್ಸ್ ನ ಬರ್ರಕ್ ಪೊರೆಯಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದ ಪ್ರಕರಣ ನಡೆದಿದೆ. ಬಿಜಾಪುರ್ ಕ್ಷೇತ್ರದಲ್ಲಿ ಟಿಎಂಸಿ ಕಾರ್ಯಕರ್ತ ಮದಬ್ ದಾಸ್ ಅವರ ಮೇಲೆ ಬಿಜೆಪಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಕೇತುಗ್ರಾಮ್, ಪೂರ್ವ ಬುರ್ದ್ವಾನ್ ನಲ್ಲಿ ಸಹ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ಘರ್ಷಣೆ ಏರ್ಪಟ್ಟಿದೆ. ಬಿಜೆಪಿಯ ಓರ್ವ ಕಾರ್ಯಕರ್ತನಿಗೆ ತಲೆಗೆ ಗಾಯವಾಗಿದೆ.
43 ವಿಧಾನಸಭಾ ಕ್ಷೇತ್ರಗಳು ಆರನೇ ಹಂತದಲ್ಲಿ ಮತದಾನಕ್ಕೆ ಒಳಪಟ್ಟಿದ್ದು ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಆರನೇ ಹಂತದಲ್ಲಿ 1.03 ಕೋಟಿ ಮತದಾರರು 306 ಅಭ್ಯರ್ಥಿಗಳ ಭವಿಷ್ಯ ಬರೆಯುತ್ತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದ ಮತದಾನ ಏಪ್ರಿಲ್ 29ರಂದು ನಡೆಯಲಿದ್ದು ಮತ ಎಣಿಕೆ ಮೇ 2ರಂದು ನಡೆದು ಫಲಿತಾಂಶ ಪ್ರಕಟವಾಗಲಿದೆ.