ಹವಾಮಾನ ವೈಫರೀತ್ಯ ಸಮಸ್ಯೆ ಎದುರಿಸಲು ಸೂಕ್ತ ಕ್ರಮ ಅಗತ್ಯ- ಪ್ರಧಾನಿ ಮೋದಿ

ಹವಾಮಾನ ವೈಫರೀತ್ಯ ಸಮಸ್ಯೆ ಎದುರಿಸಲು ಹೆಚ್ಚಿನ ವೇಗ ಹಾಗೂ ದೊಡ್ಡ ಪ್ರಮಾಣದ ಸೂಕ್ತ ಕ್ರಮ ಅಗತ್ಯ ಎಂದು ಗುರುವಾರ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಸಮಸ್ಯೆಯನ್ನು ಬಗೆಹರಿಸಲು ಭಾರತ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ ಎಂದಿದ್ದಾರೆ.

Published: 22nd April 2021 08:22 PM  |   Last Updated: 22nd April 2021 08:22 PM   |  A+A-


PM_Modi1

ಪ್ರಧಾನಿ ನರೇಂದ್ರ ಮೋದಿ

Posted By : Nagaraja AB
Source : The New Indian Express

ನವದೆಹಲಿ: ಹವಾಮಾನ ವೈಫರೀತ್ಯ ಸಮಸ್ಯೆ ಎದುರಿಸಲು ಹೆಚ್ಚಿನ ವೇಗ ಹಾಗೂ ದೊಡ್ಡ ಪ್ರಮಾಣದ ಸೂಕ್ತ ಕ್ರಮ ಅಗತ್ಯ ಎಂದು ಗುರುವಾರ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಸಮಸ್ಯೆಯನ್ನು ಬಗೆಹರಿಸಲು ಭಾರತ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ ಎಂದಿದ್ದಾರೆ.

ಅಮೆರಿಕ ಆಯೋಜಿಸಿದ್ದ 40 ಜಾಗತಿಕ ನಾಯಕರ ವರ್ಚುಯಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು,  ಸುಸ್ಥಿರ ಜೀವನ ಶೈಲಿ ಮತ್ತು ಮೂಲಗಳಿಗೆ ಹಿಂತಿರುಗಿ ಮಾರ್ಗದರ್ಶಿ ತತ್ವ ಕೋವಿಡ್ ನಂತರ ಯುಗದ ಆರ್ಥಿಕ ಕಾರ್ಯತಂತ್ರಕ್ಕೆ ಪ್ರಮುಖ ಆಧಾರಸ್ತಂಭವಾಗಬೇಕು ಎಂದರು.

ಜೋ- ಬೈಡೆನ್ ಜೊತೆಗೂಡಿ ಭಾರತ-ಯುಎಸ್ ಹವಾಮಾನ ಮತ್ತು ಶುದ್ಧ ಇಂಧನ ಅಜೆಂಡಾ 2030 ಸಹಭಾಗಿತ್ವವನ್ನು'  ಪ್ರಾರಂಭಿಸುತ್ತಿರುವುದಾಗಿ ಹೇಳಿದ ಪ್ರಧಾನಿ,  ನಾವಿಬ್ಬರು ಒಟ್ಟಾಗಿ ಹೂಡಿಕೆ, ಶುದ್ಧ ತಂತ್ರಜ್ಞಾನ ಹಾಗೂ ಹಸಿರು ಸಹಭಾಗಿತ್ವಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು. 

ಸಜ್ಜುಗೊಳಿಸಲು, ಶುದ್ಧ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಮತ್ತು ಹಸಿರು ಸಹಯೋಗವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತೇವೆ" ಎಂದು ಅವರು ಶೃಂಗಸಭೆಯಲ್ಲಿ ಹೇಳಿದರು.

ಅಭಿವೃದ್ಧಿ ಸವಾಲುಗಳ ಹೊರತಾಗಿಯೂ ಶುದ್ಧ ಇಂಧನ, ಇಂಧನ ದಕ್ಷತೆ, ಕ್ಷೇತ್ರದಲ್ಲಿ ಭಾರತ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮಾನವೀಯತೆಯಿಂದ ಹವಾಮಾನ ವೈಫರೀತ್ಯ ಎದುರಿಸಲು ಸೂಕ್ತ ಅಕ್ರಮ ಅಗತ್ಯವಾಗಿದೆ. ಇಂತಹ ಹೆಚ್ಚಿನ ವೇಗದ,  ದೊಡ್ಡ ಪ್ರಮಾಣದ ಕ್ರಮ ಅಗತ್ಯವಾಗಿದೆ. ನಮ್ಮ ಪಾತ್ರವನ್ನು ನಾವು ಮಾಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp