ಜಮ್ಮು-ಕಾಶ್ಮೀರದಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ 34 ಗಂಟೆ ಕರ್ಫ್ಯೂ ಜಾರಿ

ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ 34 ಗಂಟೆ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ.
ಬೈಕ್ ಸವಾರನನ್ನು ತಡೆಗಟ್ಟಿರುವ ಜಮ್ಮು-ಕಾಶ್ಮೀರ  ಭದ್ರತಾ ಸಿಬ್ಬಂದಿ
ಬೈಕ್ ಸವಾರನನ್ನು ತಡೆಗಟ್ಟಿರುವ ಜಮ್ಮು-ಕಾಶ್ಮೀರ ಭದ್ರತಾ ಸಿಬ್ಬಂದಿ

ಶ್ರೀನಗರ:  ಕೊರೋನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದ 34 ಗಂಟೆ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ.

ಶನಿವಾರ ರಾತ್ರಿ 8 ಗಂಟೆಯಿಂದ ಏಪ್ರಿಲ್ 26 ಸೋಮವಾರದವರೆಗೂ ಸಂಪೂರ್ಣ ಕೊರೋನಾ ಕರ್ಫ್ಯೂವನ್ನು ಹೇರಲಾಗಿದೆ. ಅತ್ಯವಶ್ಯಕ ಹಾಗೂ ತುರ್ತು ಸೇವೆಗಳಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಮಾರುಕಟ್ಟೆಗಳು, ವಾಣಿಜ್ಯ ಸಂಸ್ಥೆಗಳು ಬಂದ್ ಆಗಲಿವೆ ಎಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗೌರ್ವನರ್ ಮನೋಜ್ ಸಿನ್ಹಾ ಅವರ ಕಚೇರಿ ಟ್ವೀಟ್ ಮಾಡಿದೆ.

ಏಪ್ರಿಲ್ 8 ರಂದು ಜಮ್ಮು-ಕಾಶ್ಮೀರದ ಎಂಟು ನಗರ ಜಿಲ್ಲೆಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೂ  ನೈಟ್ ಕರ್ಫ್ಯೂವನ್ನು ಜಾರಿಗೊಳಿಸಲಾಗಿತ್ತು. ನಂತರ ಅದನ್ನು ಎಲ್ಲಾ 20 ಜಿಲ್ಲೆಗಳ ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೂ ಏಪ್ರಿಲ್ 20ರವರೆಗೂ ವಿಸ್ತರಿಸಲಾಗಿತ್ತು.

ಜಮ್ಮು-ಕಾಶ್ಮೀರದಲ್ಲಿ ಶುಕ್ರವಾರ 1937 ಮಂದಿ ಕೋವಿಡ್ ಪಾಸಿಟಿವ್ ಬಂದಿದ್ದು, ಒಟ್ಟಾರೇ ಸೋಂಕಿತರ ಸಂಖ್ಯೆ 1,56,334ಕ್ಕೆ ಏರಿಕೆಯಾಗಿದೆ. 19 ರೋಗಿಗಳು ಸಾವಿನೊಂದಿಗೆ ಒಟ್ಟಾರೇ ಸಾವಿನ  ಸಂಖ್ಯೆ 2,111ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com