ಪತಂಜಲಿ ಮುಖ್ಯ ಕ್ಯಾಂಪಸ್ ನಲ್ಲಿ ಯಾರಿಗೂ ಕೊರೋನಾ ಸೋಂಕಿಲ್ಲ: ಬಾಬಾ ರಾಮದೇವ್

ಪತಂಜಲಿ ಯೋಗಪೀಠದ ಮುಖ್ಯ ಕ್ಯಾಂಪಸ್ ನಲ್ಲಿ ಯಾವುದೇ ಕೊರೋನಾ ವೈರಸ್ ಪ್ರಕರಣಗಳಿಲ್ಲ ಎಂದು ಯೋಗಗುರು ಬಾಬಾ ರಾಮ್ ದೇವ್ ಸ್ಪಷ್ಟನೆ ನೀಡಿದ್ದಾರೆ.
ಬಾಬಾ ರಾಮದೇವ್
ಬಾಬಾ ರಾಮದೇವ್

ಹರಿದ್ವಾರ್: ಪತಂಜಲಿ ಯೋಗಪೀಠದ ಮುಖ್ಯ ಕ್ಯಾಂಪಸ್ ನಲ್ಲಿ ಯಾವುದೇ ಕೊರೋನಾ ವೈರಸ್ ಪ್ರಕರಣಗಳಿಲ್ಲ ಎಂದು ಯೋಗಗುರು ಬಾಬಾ ರಾಮ್ ದೇವ್ ಸ್ಪಷ್ಟನೆ ನೀಡಿದ್ದಾರೆ.

ಪತಂಜಲಿ ಕ್ಯಾಂಪಸ್ ನಲ್ಲಿ ಕೊರೋನಾ ವೈರಸ್ ಪ್ರಕರಣಗಳಿವೆ ಎಂಬ ಮಾಧ್ಯಮದ ವರದಿಗೆ ಪ್ರತಿಕ್ರಿಯಿಸಿದ ಅವರು ಆಚಾರ್ಯಕುಲಂ ಗೆ ಬಂದ ಹೊಸ ವಿದ್ಯಾರ್ಥಿಗಳನ್ನು ಕೋವಿಡ್-19 ಪರೀಕ್ಷೆ ಒಳಪಡಿಸಲಾಗಿತ್ತು.

ಕೋವಿಡ್ ಪಾಸಿಟಿವ್ ಬಂದವರಿಗೆ ಕ್ಯಾಂಪಸ್ ಒಳಗಡೆ ಪ್ರವೇಶ ನಿರಾಕರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪತಂಜಲಿ ಕ್ಯಾಂಪಸ್ ನಲ್ಲಿ ಯಾರೋಬ್ಬರಿಗೂ ಸೋಂಕು ಪತ್ತೆಯಾಗಿಲ್ಲ, ಹೊಸದಾಗಿ ಪ್ರವೇಶಕ್ಕೆ ಬಂದ ವಿದ್ಯಾರ್ಥಿಗಳಿಗೆ ಕೊರೋನಾ ಪರೀಕ್ಷೆ ಮಾಡಿಸಿದ್ದೇನೆ, ಅದರಲ್ಲಿ 14 ಮಂದಿಗೆ ಪಾಸಿಟಿವ್ ಇತ್ತು ಎಂದು ತಿಳಿಸಿದ್ದಾರೆ. ಪತಂಜಲಿ ಕ್ಯಾಂಪಸ್ ನಲ್ಲಿ 83 ಮಂದಿಗೆ ಸೋಂಕು ತಗುಲಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com