ಜಿಲ್ಲಾ ಕೇಂದ್ರಗಳಲ್ಲಿ ಆಸ್ಪತ್ರೆಗಳಿಗೆ ನಿರಂತರವಾಗಿ ಆಮ್ಲಜನಕ ಪೂರೈಸಲು ಪಿಎಂ ಕೇರ್ಸ್ ಫಂಡ್ ನಿಂದ 551 ಘಟಕ ಸ್ಥಾಪನೆ
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಳ ಲಭ್ಯತೆ ಸರಾಗವಾಗಲು ಪ್ರಧಾನ ಮಂತ್ರಿಗಳ ನಿರ್ದೇಶನದ ಪ್ರಕಾರ, 551 ಮೀಸಲು ಪಿಎಸ್ಎ(ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್) ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸಾರ್ವಜನಿಕ ಆರೋಗ್ಯ ಸೌಕರ್ಯದೊಳಗೆ ಸ್ಥಾಪಿಸಲು ಅನುದಾನ ನೀಡಲು ಪಿಎಂ ಕೇರ್ಸ್ ಫಂಡ್ ನಿಂದ ತಾತ್ವಿಕ ಅನುಮೋದನೆ ನೀಡಲಾಗಿದೆ.
Published: 25th April 2021 01:24 PM | Last Updated: 25th April 2021 01:59 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಳ ಲಭ್ಯತೆ ಸರಾಗವಾಗಲು ಪ್ರಧಾನ ಮಂತ್ರಿಗಳ ನಿರ್ದೇಶನದ ಪ್ರಕಾರ, 551 ಮೀಸಲು ಪಿಎಸ್ಎ(ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್) ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸಾರ್ವಜನಿಕ ಆರೋಗ್ಯ ಸೌಕರ್ಯದೊಳಗೆ ಸ್ಥಾಪಿಸಲು ಅನುದಾನ ನೀಡಲು ಪಿಎಂ ಕೇರ್ಸ್ ಫಂಡ್ ನಿಂದ ತಾತ್ವಿಕ ಅನುಮೋದನೆ ನೀಡಲಾಗಿದೆ.
ಸಾಧ್ಯವಾದಷ್ಟು ಬೇಗ ಈ ಘಟಕಗಳ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಬೇಕೆಂದು ಪ್ರಧಾನ ಮಂತ್ರಿ ಮೋದಿ ಆದೇಶ ನೀಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಆಕ್ಸಿಜನ್ ಲಭ್ಯತೆಗೆ ಈ ಘಟಕಗಳು ಪ್ರಮುಖ ಉತ್ತೇಜನ ನೀಡಲಿವೆ.
ಈ ಮೀಸಲು ಘಟಕಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ನಿರ್ದಿಷ್ಟ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮೂಲಕ ಸಂಗ್ರಹಣೆ ಮಾಡಲಾಗುತ್ತದೆ.
ಪಿಎಂ ಕೇರ್ಸ್ ಫಂಡ್, ಈ ವರ್ಷದ ಆರಂಭದಲ್ಲಿ ಹೆಚ್ಚುವರಿ 162 ಮೀಸಲು ಪಿಎಸ್ ಎ ವೈದ್ಯಕೀಯ ಆಕ್ಸಿಜನ್ ಉತ್ಪತ್ತಿ ಘಟಕಗಳ ಸ್ಥಾಪನೆಗೆ 201.58 ಕೋಟಿ ರೂಪಾಯಿಗಳನ್ನು ನೀಡಿತ್ತು. ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಎಸ್‌ಎ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಹಿಂದಿನ ಮೂಲ ಉದ್ದೇಶವೆಂದರೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಮತ್ತು ಈ ಪ್ರತಿಯೊಂದು ಆಸ್ಪತ್ರೆಗಳು ಆಮ್ಲಜನಕ ಉತ್ಪಾದನಾ ಸೌಲಭ್ಯವನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳುವುದಾಗಿದೆ.
ಕಳೆದ ಕೆಲವು ದಿನಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಹೊಸ ಕೊರೋನ ವೈರಸ್ ಪ್ರಕರಣಗಳು ವರದಿಯಾಗುತ್ತಿರುವ ಭಾರತವು ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಹೋರಾಡುತ್ತಿದೆ. ಹಲವು ರಾಜ್ಯಗಳ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯಿಂದ ತತ್ತರಿಸುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯ ಹಲವಾರು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯಿಂದ ಬಳಲುತ್ತಿವೆ.
ಕೆಲವು ಆಸ್ಪತ್ರೆಗಳು ಅಲ್ಪಾವಧಿಯ ವ್ಯವಸ್ಥೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದರೂ, ಆಮ್ಲಜನಕದ ಬಿಕ್ಕಟ್ಟಿಗೆ ಸದ್ಯಕ್ಕೆ ಅಂತ್ಯ ಕಾಣಿಸದ ಲಕ್ಷಣಗಳಿವೆ.
551 oxygen plants that will be set up will ensure uninterrupted supply of oxygen to hospitals at district headquarters: PMO
— Press Trust of India (@PTI_News) April 25, 2021