ಎರಡನೇ ಕೋವಿಡ್ ಅಲೆಗೆ ಏಪ್ರಿಲ್‌ನಲ್ಲಿ ಭಾರತದಾದ್ಯಂತ 34 ವೈದ್ಯರು ಸಾವು: ಐಎಂಎ

ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶವನ್ನು ಅಪ್ಪಳಿಸಿಸಿರುವಂತೇ ಕೊರೋನಾವೈರಸ್ ಸೋಂಕಿನಿಂದಾಗಿ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಈವರೆಗೆ ಕನಿಷ್ಠ 34 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಸೋಮವಾರ ಬಿಡುಗಡೆ ಮಾಡಿದ ವಿವರಗಳು ತಿಳಿಸಿವೆ.

Published: 26th April 2021 04:23 PM  |   Last Updated: 26th April 2021 04:41 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : The New Indian Express

ನವದೆಹಲಿ: ಸಾಂಕ್ರಾಮಿಕ ರೋಗದ ಎರಡನೇ ಅಲೆ ದೇಶವನ್ನು ಅಪ್ಪಳಿಸಿಸಿರುವಂತೇ ಕೊರೋನಾವೈರಸ್ ಸೋಂಕಿನಿಂದಾಗಿ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಈವರೆಗೆ ಕನಿಷ್ಠ 34 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಸೋಮವಾರ ಬಿಡುಗಡೆ ಮಾಡಿದ ವಿವರಗಳು ತಿಳಿಸಿವೆ.

ಸಾಂಕ್ರಾಮಿಕ ಕಾಯಿಲೆಗೆ ಬಲಿಯಾದ ಕಿರಿಯ ವೈದ್ಯರಿಗೆ ಕೇವಲ 28 ವರ್ಷ ವಯಸ್ಸಾಗಿದ್ದು ಈ ವ್ಯಕ್ತಿ ಮಹಾರಾಷ್ಟ್ರ ನಿವಾಸಿಯಾಗಿದ್ದು ಇನ್ನಿಬ್ಬರಿಗೆ 30ರ ಹರೆಯವೆಂದು ವೈದ್ಯ ದಾಖಲಾತಿ ವಿವರಗಳು ಹೇಳಿದೆ. ಎರಡನೇ ಅಲೆಯಲ್ಲಿ ಪ್ರಾಣ ಕಳೆದುಕೊಂಡ ವೈದ್ಯರಲ್ಲಿ ಹೆಚ್ಚಿನವರು 50-70 ವರ್ಷದವರಾಗಿದ್ದರು. ಅದಾಗ್ಯೂ 40-49 ವರ್ಷ ವಯಸ್ಸಿನವರಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಅತಿ ಹೆಚ್ಚು ವೈದ್ಯರ ಸಾವುಗಳು ಮಹಾರಾಷ್ಟ್ರ ಹಾಗೂ ಬಿಹಾರದಲ್ಲಿ ಸಂಭವಿಸಿದ್ದು ಆ ಎರಡೂ ರಾಜ್ಯಗಳಲ್ಲಿ ತಲಾ ಐವರು ವೈದ್ಯರು ನಿಧನರಾಗಿದ್ದಾರೆ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ತಲಾ 4 ವೈದ್ಯರು ಅಸುನೀಗಿದ್ದಾರೆ.

ಕೋವಿಡ್-19 ಸೋಂಕು ದೃಢಪಟ್ಟ ನಂತರ ನಿಧನರಾದ ಪ್ರತಿಯೊಬ್ಬ ವೈದ್ಯರ ಕೋವಿಡ್ ವ್ಯಾಕ್ಸಿನೇಷನ್ ಸ್ಥಿತಿಯನ್ನು ಕಂಡುಹಿಡಿಯಲು ಸಂಘವಿದೀಗ ಪ್ರಯತ್ನದಲ್ಲಿದೆ. ಜನವರಿ 16 ರಂದು ದೇಶದಲ್ಲಿ ಪ್ರಾರಂಭವಾದ ಕೊರೋನಾ ವ್ಯಾಕ್ಸಿನೇಷನ್ ಡ್ರೈವ್ ಮೊದಲ ಬಾರಿಗೆ ಆರೋಗ್ಯ ಕಾರ್ಯಕರ್ತರಿಗಾಗಿ ತೆರೆಯಲ್ಪಟ್ಟಿತು ಮತ್ತು ಕೇಂದ್ರವು ಇತ್ತೀಚೆಗೆ 80% ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಎರಡು-ಡೋಸ್  ವ್ಯಾಕ್ಸಿನೇಷನ್ ಶೆಡ್ಯೂಲ್ ನಲ್ಲಿ ಕನಿಷ್ತ ಮೊದಲ ಡೋಸ್ ಪಡೆದಿದ್ದಾರೆ ಎಂದು ಹೇಳಿದೆ.

ಕಳೆದ ವರ್ಷ, ಐಎಂಎ ಅಂಕಿಅಂಶಗಳ ಪ್ರಕಾರ ದೇಶಾದ್ಯಂತ ಸಾಂಕ್ರಾಮಿಕ ಕಾಯಿಲೆಯಿಂದ730 ಕ್ಕೂ ಹೆಚ್ಚು ವೈದ್ಯರು ಸಾವನ್ನಪ್ಪಿದ್ದರು ಆದರೆ ಸಂಸತ್ತಿನಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸರ್ಕಾರವು ಈ ಸಂಖ್ಯೆಯನ್ನು ಖಾತರಿಪಡಿಸಿಲ್ಲ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಭಾಗವಾಗಿ 50 ಲಕ್ಷ ರೂ.ಗಳ ವಿಮಾ ಯೋಜನೆಯಡಿ, ಕೋವಿಡ್ 19 ಕರ್ತವ್ಯದಲ್ಲಿದ್ದಾಗ ಯುವ ಆರೋಗ್ಯ ಕಾರ್ಯಕರ್ತರಿಗೆ ನಿಡಲಾಗುವ ಪರಿಹಾರಕ್ಕಾಗಿ ಕೇವಲ 287 ಕೋರಿಕೆಗಳು ಬಂದಿದ್ದವು. ಅವುಗಳ ಪೈಕಿ ಸುಮಾರು 162 ವೈದ್ಯರ ಕುಟುಂಬಗಳು ಯೋಜನೆಯ ಲಾಭವನ್ನು ಪಡೆದಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp