ಕೋವಿಡ್ ಸಂಕಷ್ಟ ಸ್ಥಿತಿ: ಐಪಿಎಲ್ ಸುದ್ದಿ ಪ್ರಕಟಿಸದಿರಲು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಿರ್ಧಾರ

ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದೆ. ಸಾವಿರಾರು ಮಂದಿ ಇಂದು ಹಲವು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ಲಾಂಛನ
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ಲಾಂಛನ

ಚೆನ್ನೈ: ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದೆ. ಸಾವಿರಾರು ಮಂದಿ ಇಂದು ಹಲವು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂದು ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಒಂದೆಡೆಯಾದರೆ, ಸಾಮಾನ್ಯ ವರ್ಗದವರು, ಬಡವರು ಆರ್ಥಿಕವಾಗಿ ಕೂಡ ಸಾಕಷ್ಟು ಬಳಲುತ್ತಿದ್ದಾರೆ. ಆಕ್ಸಿಜನ್ ಗಾಗಿ ಹಾಹಾಕಾರವೆದ್ದಿದೆ. ರಾಜ್ಯಗಳ ರಾಜಧಾನಿಗಳಲ್ಲಿ ಆಸ್ಪತ್ರೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಹಲವರು ಕೋವಿಡ್ ನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಇಂತಹ ದುರಂತ ಸನ್ನಿವೇಶದಲ್ಲಿ ಭಾರತದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ. ಕ್ರಿಕೆಟ್ ಆಟದ ಸಮಸ್ಯೆಯೇನೂ ಇಲ್ಲ, ಆದರೆ ಇಂದಿನ ಆರೋಗ್ಯ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಮಾನವೀಯ ಹಿನ್ನೆಲೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಿನಪತ್ರಿಕೆ ಐಪಿಎಲ್ ಪಂದ್ಯಾವಳಿಯ ಸುದ್ದಿಗಳನ್ನು ಪ್ರಕಟಿಸದೇ ಇರಲು ನಿರ್ಧರಿಸಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಮುಂದುವರಿಯಲಿದೆ.

ಈ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಓದುಗರು ಸಹಕರಿಸಬೇಕೆಂದು ಮತ್ತು ಕಷ್ಟದ ಸನ್ನಿವೇಶದಲ್ಲಿ ಎಲ್ಲರೂ ಒಂದು ರಾಷ್ಟ್ರ, ಒಂದು ಸಂಕಲ್ಪದ ಆಶಯದೊಂದಿಗೆ ಒಂದಾಗಿರೋಣ ಎಂದು ಪತ್ರಿಕೆಯ ವ್ಯವಸ್ಥಾಪಕ ಮಂಡಳಿ ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com