ಕೋವಿಡ್: ಆಕ್ಸಿಜನ್ ಗಾಗಿ ಅಯೋಧ್ಯೆಯಿಂದ ಬಂಗಾಳಕ್ಕೆ ತೆರಳಿದ ದಂಪತಿ!

ಕೊರೋನಾ ಪೀಡಿತ ಮಧ್ಯ ವಯಸ್ಸಿನ ದಂಪತಿ ಉತ್ತರಪ್ರದೇಶದಿಂದ 850 ಕಿ.ಮೀ. ದೂರದಲ್ಲಿರುವ ಬಂಗಾಳಕ್ಕೆ ಪ್ರಯಾಣಿಸಿ, ಚಿನ್ಸೂರ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.
ಕೋವಿಡ್-19 ಪೀಡಿತೆ ರೇಖಾ
ಕೋವಿಡ್-19 ಪೀಡಿತೆ ರೇಖಾ

ಚಿನ್ಸುರಾ: ಕೊರೋನಾ ಪೀಡಿತ ಮಧ್ಯ ವಯಸ್ಸಿನ ದಂಪತಿ ಉತ್ತರಪ್ರದೇಶದಿಂದ 850 ಕಿ.ಮೀ. ದೂರದಲ್ಲಿರುವ ಬಂಗಾಳಕ್ಕೆ ಪ್ರಯಾಣಿಸಿ, ಚಿನ್ಸೂರ್ ನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.

ಈ ದಂಪತಿ ತವರು ರಾಜ್ಯ ಉತ್ತರ ಪ್ರದೇಶದಲ್ಲಿ ಆಡ್ಮಿಟ್ ಆಗಲು ಸುಮಾರು ಆರೇಳು ಆಸ್ಪತ್ರೆ ಬಾಗಿಲು ಹತ್ತರೂ ಎಲ್ಲಿಯೂ ಆಡ್ಮೀಟ್ ಮಾಡಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಆಕ್ಸಿಜನ್ ಕೊರತೆಯಿರುವುದಾಗಿ ಹೇಳಿ ಆಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದಾರೆ. ತದನಂತರ ಇವರು  ಚಿನ್ಸೂರ್ ಗೆ ಪ್ರಯಾಣಿಸಿದ್ದಾರೆ.

50 ವರ್ಷದ ಲಾಲ್ ಜಿ ಯಾದವ್ ಹಾಗೂ ಅವರ ಪತ್ನಿ ರೇಖಾ (48) ಅವರ ಹೂಗ್ಲಿ, ಮೊಗ್ರಾದಲ್ಲಿರುವ ಸಂಬಂಧಿಕರು ಬಂಗಾಳಕ್ಕೆ ಬರುವಂತೆ ಸಲಹೆ ನೀಡಿದ ನಂತರ ಅಯೋಧ್ಯೆಯಿಂದ ಅಂಬುಲೆನ್ಸ್ ನಲ್ಲಿ ಗುರುವಾರ ಬಂಗಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. 

ಶುಕ್ರವಾರ ತಡರಾತ್ರಿ ಆಗಮಿಸಿದ ದಂಪತಿ ಅಜಂತಾ ಸೇವಾ ಸದನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರು ಆಗಮಿಸಿದ್ದಾಗ ಉಸಿರಾಟದ ಸಮಸ್ಯೆಯಿತ್ತು. ಸದ್ಯ ಲಾಲ್ ಜೀ ಪರಿಸ್ಥಿತಿ ಗಂಭೀರವಾಗಿದ್ದು, ರೇಖಾ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಆರೇಳು ಆಸ್ಪತ್ರೆ ಅಲೆದರೂ ಎಲ್ಲಿಯೂ ಆಡ್ಮೀಟ್ ಮಾಡಿಕೊಳ್ಳದಿದ್ದಾಗ ಪರ್ಯಾಯ ಆಯ್ಕೆಯಿಲ್ಲದೆ, ತವರು ರಾಜ್ಯವಾದ ಬಂಗಾಳಕ್ಕೆ ಬಂದು ಆಡ್ಮೀಟ್ ಆಗಿದ್ದು, ಜೀವ ಉಳಿದಿದೆ ಎಂದು ರೇಖಾ ಹೇಳಿದ್ದಾರೆ.

ಮಾವನಿಗೆ ರೆಮಿಡಿಸಿವಿಯರ್ ಔಷಧ ನೀಡಲಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಳ್ಳುವ ವಿಶ್ವಾಸದಲ್ಲಿರುವುದಾಗಿ ರೇಖಾ ಸಹೋದರ ರವಿಶಂಕರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com