ಅಸ್ಸಾಂನಲ್ಲಿ ಭಾರೀ ಭೂಕಂಪ: 6.4 ತೀವ್ರತೆ, ನಡುಗಿದ ಕಟ್ಟಡ, ಕಂಗೆಟ್ಟ ಜನ, ಪ್ರಧಾನಿ-ಗೃಹ ಸಚಿವ ನೆರವಿನ ಭರವಸೆ

ಕೊರೋನಾ ಆತಂಕ, ಸಾವು-ನೋವಿನ ನಡುವೆ ಅಸ್ಸಾಂ ರಾಜ್ಯದಲ್ಲಿ ಬುಧವಾರ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ಇಂದು ಬೆಳಗ್ಗೆ 7.51ರ ಹೊತ್ತಿಗೆ ಅಸ್ಸಾಂನ ಸೋನಿಪುರ್ ನಲ್ಲಿ ಸಂಭವಿಸಿದೆ.ಯಾವುದೇ ಸಾವು-ನೋವು ಆದ ಬಗ್ಗೆ ವರದಿಯಾಗಿಲ್ಲ.
ಭೂಕಂಪ ನಂತರದ ದೃಶ್ಯ
ಭೂಕಂಪ ನಂತರದ ದೃಶ್ಯ

ಗುವಾಹಟಿ: ಕೊರೋನಾ ಆತಂಕ, ಸಾವು-ನೋವಿನ ನಡುವೆ ಅಸ್ಸಾಂ ರಾಜ್ಯದಲ್ಲಿ ಬುಧವಾರ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ಇಂದು ಬೆಳಗ್ಗೆ 7.51ರ ಹೊತ್ತಿಗೆ ಅಸ್ಸಾಂನ ಸೋನಿಪುರ್ ನಲ್ಲಿ ಸಂಭವಿಸಿದೆ.ಯಾವುದೇ ಸಾವು-ನೋವು ಆದ ಬಗ್ಗೆ ವರದಿಯಾಗಿಲ್ಲ.

ರಾಜ್ಯದ ಪ್ರತಿಯೊಬ್ಬ ನಾಗರಿಕರ ಸುರಕ್ಷತೆಗಾಗಿ ದೇವರನ್ನು ಪ್ರಾರ್ಥಿಸುತ್ತೇನೆ, ಎಲ್ಲರೂ ಎಚ್ಚರವಾಗಿರಿ, ಎಲ್ಲಾ ಜಿಲ್ಲೆಗಳಿಂದ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಅವರ ಜೊತೆಗೆ ಭೂಕಂಪ ಸಂಭವಿಸಿರುವ ಬಗ್ಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದು ರಾಜ್ಯಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದೇನೆ. ಅಸ್ಸಾಂ ಜನತೆಯ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಗೃಹ ಸಚಿವ ಅಮಿತ್ ಶಾ, ಭೂಕಂಪ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಅಸ್ಸಾಂ ನಾಗರಿಕರ ರಕ್ಷಣೆಗೆ ಕೇಂದ್ರ ಸರ್ಕಾರ ದೃಢವಾಗಿ ಜೊತೆಗಿರುತ್ತದೆ. ಪ್ರತಿಯೊಬ್ಬರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇಂದು ಬೆಳಗ್ಗೆ ಭೂಕಂಪ ಸಂಭವಿಸಿದ ಬಳಿಕ ಸೋನಿತ್ ಪುರ್ ನಲ್ಲಿ ರಸ್ತೆಗಳಲ್ಲಿ ಬಿರುಕು ಕಂಡುಬಂದಿದೆ. ನಾಗಾಂವ್ ನಲ್ಲಿ ಭೂಕಂಪಕ್ಕೆ ನಡುಗಿದ ಕಟ್ಟಡ ವಾಲಿ ಪಕ್ಕದ ಕಟ್ಟಡಕ್ಕೆ ತಾಗಿರುವ ದೃಶ್ಯ ಭೀತಿ ಹುಟ್ಟಿಸುವಂತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com