ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಸೇರಿ 27 ಮಂದಿ ವಿರುದ್ಧ ಭ್ರಷ್ಟಾಚಾರ ಆರೋಪ: ಎಫ್ಐಆರ್ ದಾಖಲು 

ಮಹಾನಗರ ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪರಮ್ ಬಿರ್ ಸಿಂಗ್(ಸಂಗ್ರಹ ಚಿತ್ರ)
ಪರಮ್ ಬಿರ್ ಸಿಂಗ್(ಸಂಗ್ರಹ ಚಿತ್ರ)

ಮುಂಬೈ: ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಅವರ ವಿರುದ್ಧ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಭ್ರಷ್ಟಾಚಾರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿದರ್ಭದ ಅಕೊಲ ಪೊಲೀಸ್ ಠಾಣೆಯಲ್ಲಿ ಪರಮ್ ಬಿರ್ ಸಿಂಗ್, ಡಿಸಿಪಿ ಪರಾಗ್ ಮನೆರೆ ಹಾಗೂ ಇತರ 26 ಮಂದಿ ಪೊಲೀಸರ ವಿರುದ್ಧ ಭ್ರಷ್ಟಾಚಾರ ಕೇಸು ದಾಖಲಾಗಿದೆ.

ಕ್ರಿಮಿನಲ್ ಪಿತೂರಿ, ಸಾಕ್ಷಿಗಳ ನಾಶ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ((ದೌರ್ಜನ್ಯ ತಡೆ ಕಾಯ್ದೆ), 1989ರ ವಿವಿಧ ಸೆಕ್ಷನ್ ಗಳಡಿಯಲ್ಲಿ ಅಕೊಲದಲ್ಲಿ ಕೊತ್ವಾಲಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಝಿರೋ ಎಫ್ಐಆರ್ ನ್ನು ಇವರ ಮೇಲೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು ನಂತರ ಅದನ್ನು ಥಾಣೆ ಸಿಟಿ ಪೊಲೀಸ್ ಗೆ ವಿಚಾರಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪೊಲೀಸ್ ಇನ್ಸ್ ಪೆಕ್ಟರ್ ಭೀಮ್ ರಾವ್ ಘಡ್ಗೆ ತಮ್ಮ ದೂರಿನಲ್ಲಿ, ಪರಮ್ ಬಿರ್ ಸಿಂಗ್ ಮತ್ತು ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಸರಣಿ ಆರೋಪಗಳ ಸುರಿಮಳೆಗೈದಿದ್ದಾರೆ. ಪರಮ್ ಬಿರ್ ಸಿಂಗ್ ಅವರು ಥಾಣೆ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗಿದ್ದಾಗ ಭ್ರಷ್ಟಾಚಾರವೆಸಗಿದ್ದರು ಎಂದು ಆರೋಪದಲ್ಲಿದೆ.

2015ರಿಂದ 2018ರವರೆಗೆ ತಾವು ಕೂಡ ಥಾಣೆ ನಗರ ಪೊಲೀಸ್ ಆಯುಕ್ತರ ಕೆಳಗೆ ಕೆಲಸ ಮಾಡಿದ್ದು ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾಗಿದ್ದ ಪರಮ್ ಬಿರ್ ಸಿಂಗ್ ಮತ್ತು ಇತರ ಅಧಿಕಾರಿಗಳು ಹಲವು ಭ್ರಷ್ಟಾಚಾರಗಳನ್ನು ನಡೆಸಿದ್ದಾರೆ. ಎಫ್ಐಆರ್ ನಲ್ಲಿ ದಾಖಲಾಗಿರುವವರ ವಿರುದ್ಧ ಚಾರ್ಚ್ ಶೀಟ್ ಸಲ್ಲಿಸದಂತೆ ಕೂಡ ತಮಗೆ ಪರಮ್ ಬಿರ್ ಸಿಂಗ್ ಕೇಳಿಕೊಂಡಿದ್ದಾರೆ ಎಂದು ಭೀಮ್ ರಾವ್ ಘಡ್ಗೆ ದೂರಿನಲ್ಲಿ ಹೇಳಿದ್ದಾರೆ.

ಘಡ್ಗೆಯವರು ಪ್ರಸ್ತುತ ಅಕೊಲ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ವಹಿಸುತ್ತಿದ್ದು, ಥಾಣೆಯಲ್ಲಿರುವಾಗ ಪರಮ್ ಬಿರ್ ಸಿಂಗ್ ಅವರ ಮಾತುಗಳನ್ನು ಪಾಲಿಸಲಿಲ್ಲ ಎಂಬ ಕಾರಣಕ್ಕೆ ತಮ್ಮ ವಿರುದ್ಧ 5 ಎಫ್ಐಆರ್ ಗಳನ್ನು ದಾಖಲಿಸಿ ತಮ್ಮನ್ನು ಅಮಾನತು ಮಾಡಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com