ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್‌ಗೆ ಮಹಾರಾಷ್ಟ್ರ ಕಾಂಗ್ರೆಸ್ ನಿಂದ ಸುಮಾರು 2 ಕೋಟಿ ರೂ. ದೇಣಿಗೆ

18 ರಿಂದ 44 ವರ್ಷದೊಳಗಿನ ಜನರಿಗೆ ಉಚಿತ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ಗೆ ತನ್ನ ಕೊಡುಗೆ ನೀಡುವುದಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ(ಸಿಎಮ್‌ಆರ್‌ಎಫ್) ಸುಮಾರು 2 ಕೋಟಿ ರೂ.ಗಳನ್ನು ದೇಣಿಗೆ ನೀಡುವುದಾಗಿ...
ಬಾಲಾಸಾಹೇಬ್ ಥೋರತ್
ಬಾಲಾಸಾಹೇಬ್ ಥೋರತ್

ಮುಂಬೈ: 18 ರಿಂದ 44 ವರ್ಷದೊಳಗಿನ ಜನರಿಗೆ ಉಚಿತ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್‌ಗೆ ತನ್ನ ಕೊಡುಗೆ ನೀಡುವುದಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ(ಸಿಎಮ್‌ಆರ್‌ಎಫ್) ಸುಮಾರು 2 ಕೋಟಿ ರೂ.ಗಳನ್ನು ದೇಣಿಗೆ ನೀಡುವುದಾಗಿ ಮಹಾರಾಷ್ಟ್ರ ಕಾಂಗ್ರೆಸ್ ಗುರುವಾರ ತಿಳಿಸಿದೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕಂದಾಯ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಬಾಲಾಸಾಹೇಬ್ ಥೋರತ್ ಅವರು, ತಮ್ಮ ಒಂದು ವರ್ಷದ ವೇತನ ಮತ್ತು ಇತರ ಕಾಂಗ್ರೆಸ್ ಶಾಸಕರ ಒಂದು ತಿಂಗಳ ವೇತನವನ್ನು ಸಿಎಮ್‌ಆರ್‌ಎಫ್‌ಗೆ ನೀಡಲಿದ್ದಾರೆ ಎಂದರು.

"ನನ್ನ ಒಂದು ವರ್ಷದ ಸಂಬಳ ಮತ್ತು ಎಲ್ಲಾ ಕಾಂಗ್ರೆಸ್ ಶಾಸಕರ ಒಂದು ತಿಂಗಳ ಸಿಎಂ ಪರಿಹಾರ ನಿಧಿಗೆ ನೀಡಲಾಗುವುದು. ಇದು ಸುಮಾರು 2 ಕೋಟಿ ರೂ.ಗಳವರೆಗೆ ಆಗುತ್ತದೆ" ಎಂದು ಅವರು ಹೇಳಿದರು.

ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಸಹ 5 ಲಕ್ಷ ರೂ.ಕೋವಿಡ್ ಲಸಿಕೆಗಾಗಿ ನೀಡಲಾಗುವುದು. ಇದಲ್ಲದೆ, ಅವರ ನೇತೃತ್ವದ ಸಂಗಮ್ನರ್ ಮೂಲದ ಅಮೃತ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ 5,000 ಉದ್ಯೋಗಿಗಳ ವ್ಯಾಕ್ಸಿನೇಷನ್ ವೆಚ್ಚವನ್ನು ಸಹ ಸಿಎಂ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com