ಸ್ಫೋಟಕ ಇಡುತ್ತಿದ್ದಾಗ ಸಾವನ್ನಪ್ಪಿದ ಮಾವೋ ನಾಯಕನ ಬೃಹತ್ ಪ್ರತಿಮೆ ಸ್ಥಾಪಿಸಿದ ಗ್ರಾಮಸ್ಥರು!

ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು, ಸುಧಾರಿತ ಸ್ಫೋಟಕವನ್ನು ಇಡುತ್ತಿದ್ದಾಗ ಅದು ಆಕಸ್ಮಿಕವಾಗಿ ಕೊಲ್ಲಲ್ಪಟ್ಟ ಮಾವೋವಾದಿ ಹೋರಾಟಗಾರನ ಪ್ರತಿಮೆಯನ್ನು ಛತ್ತೀಸ್‌ಗಢ ಗ್ರಾಮವೊಂದರಲ್ಲಿ ನಿರ್ಮಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯ್ ಪುರ: ಭದ್ರತಾ ಪಡೆಗಳ ಮೇಲೆ ದಾಳಿ ಮಾಡಲು, ಸುಧಾರಿತ ಸ್ಫೋಟಕವನ್ನು ಇಡುತ್ತಿದ್ದಾಗ ಅದು ಆಕಸ್ಮಿಕವಾಗಿ ಕೊಲ್ಲಲ್ಪಟ್ಟ ಮಾವೋವಾದಿ ಹೋರಾಟಗಾರನ ಪ್ರತಿಮೆಯನ್ನು ಛತ್ತೀಸ್‌ಗಢ ಗ್ರಾಮವೊಂದರಲ್ಲಿ ನಿರ್ಮಿಸಲಾಗಿದೆ.

ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಸ್ತಾರ್ ಜಿಲ್ಲೆಯ ಗ್ರಾಮದಲ್ಲಿ ಮೃತ ಮಾವೋವಾದಿ ನಾಯಕ ಸೋಮ್ಜಿ ಅಲಿಯಾಸ್ ಮಣಿರಾಮ್ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಆದರೆ ಈ ಗ್ರಾಮದಲ್ಲಿ ನಕ್ಸಲ್ ಪ್ರಭಾವ ಹೆಚ್ಚಿದ್ದು, ಇದೇ ನಕ್ಸಲರ ಒತ್ತಡದಿಂದಾಗಿ ಗ್ರಾಮಸ್ಥರು ಆತನ ಪ್ರತಿಮೆ ಸ್ಥಾಪಿಸಿರಬಹುದು ಎಂದು  ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತ ಮಾವೋ ನಾಯಕ ಸೋಮ್ಜಿ ಅಲಿಯಾಸ್ ಮಣಿರಾಮ್ ಬುಡಕಟ್ಟು ಜನಾಂಗದವನಾಗಿದ್ದು, ಬುಡಕಟ್ಟು ಜನಾಂಗದವರು ಸಾಮಾನ್ಯವಾಗಿ ತಮ್ಮ ಸಮುದಾಯದ ಸದಸ್ಯರನ್ನು ಪೂಜಿಸಲು ಪ್ರತಿಮೆಗಳನ್ನು ನಿರ್ಮಿಸುತ್ತಾರೆ. ಬಹುಶಃ ಮಾವೋವಾದಿಗಳ ಪ್ರಭಾವದಿಂದ ಗ್ರಾಮಸ್ಥರು ಈ ಪ್ರತಿಮೆಯನ್ನು  ನಿರ್ಮಿಸಿದ್ದಾರೆ ಎಂದು ಬಸ್ತಾರ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಸುಂದರರಾಜ್ ಪಿ ಹೇಳಿದ್ದಾರೆ.

ಗ್ರಾಮದಲ್ಲಿ ನಿರ್ಮಿಸಲಾಗಿರುವ ಪ್ರತಿಮೆಯನ್ನು ಕೆಡವುವ ಬದಲು, ಪೊಲೀಸರು ಅದೇ ಪ್ರತಿಮೆ ಮೂಲಕವಾಗಿ ಮಾವೋ ನಿಗ್ರಹ ಕಾರ್ಯಾಚರಣೆಗೆ ಪ್ರತಿ ಪ್ರಚಾರ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. 

ಕಳೆದ 17 ವರ್ಷಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಂದ ಮಾವೋವಾದಿ ನಾಯಕರ ನಿಯಂತ್ರಣದಲ್ಲಿ ಅಮಾಯಕ ಗ್ರಾಮಸ್ಥರಿದ್ದು, ಶಸ್ತ್ರಾಸ್ತ್ರಗಳು ಮತ್ತು ಇತರ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಭಾಗಿಯಾಗುತ್ತಿದ್ದಾರೆ. ಈ ಪ್ರತಿಮೆಯ ಬಳಸಿಕೊಂಡು ನಮ್ಮ ಪ್ರತಿ-ಪ್ರಚಾರವನ್ನು ಪ್ರಾರಂಭಿಸಲು  ನಾವು ಯೋಜಿಸಿದ್ದೇವೆ. ಸ್ಥಳೀಯ ಬುಡಕಟ್ಟು ಕಾರ್ಯಕರ್ತರನ್ನು ಮಾವೋವಾದಿ ನಾಯಕರು ರಾಜ್ಯದ ಹೊರಗೂ ಬಳಸಿಕೊಳ್ಳುತ್ತಿದ್ದಾರೆ. ಈ  ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗುವುದು. ಹಿಂಸಾಚಾರಕ್ಕೆ ಭವಿಷ್ಯವಿಲ್ಲ. ಹಿಂಸಾಚಾರದಲ್ಲಿ ಭಾಗಿಯಾದವರು ಹಿಂಸಾಚಾರಕ್ಕೆ ಬಲಿಯಾಗುತ್ತಾರೆ ಎಂದು ಸುಂದರರಾಜ್  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com