ಹೈಕೋರ್ಟ್‌ ಮತ್ತು ನ್ಯಾಯಮಂಡಳಿಗಳಲ್ಲಿ ನ್ಯಾಯಾಧೀಶರ ನೇಮಕ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲ: ಚಿದಂಬರಂ

ದೇಶದ ಹಲವು ಹೈಕೋರ್ಟ್‌ ಮತ್ತು ನ್ಯಾಯಮಂಡಳಿಗಳಲ್ಲಿ ನ್ಯಾಯಾಧೀಶರು, ಅಧ್ಯಕ್ಷರ ಸ್ಥಾನಗಳು ಖಾಲಿ ಇವೆ. ಆದರೆ ಕೇಂದ್ರ ಸರ್ಕಾರ ಈ ಸ್ಥಾನಗಳನ್ನು ಭರ್ತಿ ಮಾಡಲು ವಿಫಲವಾಗಿದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಆರೋಪಿಸಿದ್ದಾರೆ.
ಚಿದಂಬರಂ
ಚಿದಂಬರಂ

ನವದೆಹಲಿ: ದೇಶದ ಹಲವು ಹೈಕೋರ್ಟ್‌ ಮತ್ತು ನ್ಯಾಯಮಂಡಳಿಗಳಲ್ಲಿ ನ್ಯಾಯಾಧೀಶರು, ಅಧ್ಯಕ್ಷರ ಸ್ಥಾನಗಳು ಖಾಲಿ ಇವೆ. ಆದರೆ ಕೇಂದ್ರ ಸರ್ಕಾರ ಈ ಸ್ಥಾನಗಳನ್ನು ಭರ್ತಿ ಮಾಡಲು ವಿಫಲವಾಗಿದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಹೈಕೋರ್ಟ್‌ಗಳಿಗೆ ಮಂಜೂರಾಗಿರುವ 1,080 ನ್ಯಾಯಮೂರ್ತಿ ಹುದ್ದೆಗಳ ಪೈಕಿ 416 ಖಾಲಿಯಿವೆ.ಡಿಆರ್‌ಟಿ, ಎನ್‌ಸಿಎಲ್‌ಎಟಿ, ಟಿಡಿಎಸ್‌ಎಟಿ ಸೇರಿದಂತೆ ಹಲವು ನ್ಯಾಯಮಂಡಳಿಗಳಲ್ಲಿ ಅಧ್ಯಕ್ಷರ ಸ್ಥಾನಗಳೂ ಖಾಲಿಯಿವೆ’ ಎಂದು  ಅವರು ಹೇಳಿದ್ದಾರೆ. ‘ಏಳು ವರ್ಷಗಳಿಂದ ಮೋದಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಆದರೂ ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ’ ಎಂದು ದೂರಿದ್ದಾರೆ.

ನಮ್ಮ ದೇಶದಲ್ಲಿ ಈ ಸ್ಥಾನಗಳಿಗೆ ಬೇಕಾಗಿರುವ ಅರ್ಹ ವಕೀಲರು ಮತ್ತು ನ್ಯಾಯಧೀಶರ ಕೊರತೆಗಳಿಲ್ಲ. ಆದರೆ ಕೇಂದ್ರ ಸರ್ಕಾರವು ತನ್ನ ಸಿದ್ಧಾಂತಗಳ ಬಗ್ಗೆ ಸಹಾನುಭೂತಿ ಹೊಂದಿರುವ ಜನರನ್ನು ಈ ಹುದ್ದೆಗಳಿಗಾಗಿ ಹುಡುಕುತ್ತಿದೆ. ಹಾಗಾಗಿ ಈ ಸ್ಥಾನಗಳು ಖಾಲಿಯಾಗಿಯೇ ಉಳಿದಿವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com