ಚಿನ್ನ ಗೆದ್ದ ನೀರಜ್ ಚೋಪ್ರಾರನ್ನು ರಾಜ್ಯಸಭೆಯಲ್ಲಿ ಕೊಂಡಾಡಿದ ವೆಂಕಯ್ಯ ನಾಯ್ಡು

ಟೊಕಿಯೋ ಒಲಂಪಿಕ್ಸ್'ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿ ದೇಶಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರನ್ನು ರಾಜ್ಯಸಭೆಯಲ್ಲಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಕೊಂಡಾಡಿದ್ದಾರೆ. 
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು

ನವದೆಹಲಿ: ಟೊಕಿಯೋ ಒಲಂಪಿಕ್ಸ್'ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿ ದೇಶಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾ ಅವರನ್ನು ರಾಜ್ಯಸಭೆಯಲ್ಲಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ಕೊಂಡಾಡಿದ್ದಾರೆ. 

ರಾಜ್ಯಸಭೆಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಇಂದು ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಭಾರತ ಬಿಟ್ಟು ತೊಲಗಿ ಚಳುವಳಿ'ಗೆ 79 ವರ್ಷಗಳಾದ ಹಿನ್ನೆಲೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರಿಗೆ ರಾಜ್ಯಸಭೆಯ ಎಲ್ಲಾ ಸದಸ್ಯರು ಗೌರವ ಸೂಚಿಸಿದರು.

ಬಳಿಕ ಟೊಕಿಯೊ ಒಲಂಪಿಕ್ಸ್ ಬಗ್ಗೆ ಮಾತನಾಡಿದ ವೆಂಕಯ್ಯ ನಾಯ್ಡು ಅವರು, ಒಲಂಪಿಕ್ಸ್ ನಲ್ಲಿ ನಮ್ಮ ರಾಷ್ಟ್ರ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದೂವರೆಗೆ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಿಸಿದ್ದು, ಪದಕಗಳನ್ನು ಗೆದ್ದಿದ್ದಷ್ಟೇ ಅಲ್ಲದೆ, ಸಾಕಷ್ಟು ಸಂಖ್ಯೆಯ ಕ್ರೀಡಾಪಟುಗಳು ಗೆಲುವಿನ ಸುತ್ತು ಪ್ರವೇಶಿಸಿದ್ದರು. ಈ ಟೋಕಿಯೊ ಒಲಿಂಪಿಕ್ಸ್ ಕ್ರೀಡೆ ಕುರಿತು ನಮ್ಮ ದೇಶದಲ್ಲಿ ಕ್ಷೀಣಿಸುತ್ತಿರುವ ಆತ್ಮವಿಶ್ವಾಸ ಮತ್ತು ಸ್ವಾಭಿಮಾನವನ್ನು ಮರುಸ್ಥಾಪಿಸಿದೆ. ಈ ಕ್ರೀಡಾಕೂಟ ನಮ್ಮ ದೇಶದಲ್ಲಿ ಕ್ರೀಡೆಗಳ ಪುನರುತ್ಥಾನ, ನವೋದಯ ಮತ್ತು ರಾಷ್ಟ್ರೀಯ ಜಾಗೃತಿಗೆ ನಾಂದಿ ಹಾಡಿದೆ ಎಂದು ಹೇಳಿದರು.

ಬಳಿಕ ಟೊಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಅವರನ್ನು ಕೊಂಡಾಡಿದ ಅವರು, ನೀರಜ್ ಚೋಪ್ರಾ ತಮ್ಮ ಗೋಲ್ಡನ್ ಜಾವೆಲಿನ್ ಥ್ರೋ ಮೂಲಕ ನಮ್ಮ ರಾಷ್ಟ್ರ ಹೆಮ್ಮೆಪಡುವಂತೆ ಮಾಡಿದ್ದಾರೆ. ಕ್ರೀಡಾಕ್ಷೇತ್ರದಲ್ಲಿ ಅವರು ಪ್ರಾಬಲ್ಯ ಸಾಧಿಸಿದ ರೀತಿ, ಹಿಂದೆಂದೂ ನೋಡಿಲ್ಲ, ನಮ್ಮಿಂದಲೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರತೀಯೊಬ್ಬ ಭಾರತೀಯನೂ ಸಂತಸಪಡುವಂತೆ ಮಾಡಿದ್ದಾರೆಂದು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com