ಝೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆ ತುರ್ತು ಬಳಕೆಗೆ ಈ ವಾರ ಅನುಮೋದನೆ ಸಾಧ್ಯತೆ

ಅಹ್ಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ-ಮೂರು ಡೋಸ್ ಗಳ ಕೊರೊನಾ ಲಸಿಕೆ ಝುಕೋವ್-ಡಿ ಗೆ ಈ ವಾರ ತುರ್ತು ಬಳಕೆಗೆ ಅನುಮೋದನೆ ಲಭ್ಯವಾಗುವ ಸಾಧ್ಯತೆ ಇದೆ. 
ನಗರದಲ್ಲಿ ಲಸಿಕೆ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿನಿ
ನಗರದಲ್ಲಿ ಲಸಿಕೆ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿನಿ

ನವದೆಹಲಿ: ಅಹ್ಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾ-ಮೂರು ಡೋಸ್ ಗಳ ಕೊರೊನಾ ಲಸಿಕೆ ಝುಕೋವ್-ಡಿ ಗೆ ಈ ವಾರ ತುರ್ತು ಬಳಕೆಗೆ ಅನುಮೋದನೆ ಲಭ್ಯವಾಗುವ ಸಾಧ್ಯತೆ ಇದೆ. 

ರಾಜ್ಯಸಭೆಯ ಶೂನ್ಯ ಅವಧಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಅವರು ಲಸಿಕೆಗಳ ಬಗ್ಗೆ ಮಾತನಾಡಿ, ಅಕ್ಟೋಬರ್-ನವೆಂಬರ್ ವೇಳೆಗೆ ಭಾರತದ ನಾಲ್ಕು ಫಾರ್ಮಸಿಟಿಕಲ್ ಕಂಪನಿಗಳು ಲಸಿಕೆ ದೇಶೀಯವಾಗಿ ಲಸಿಕೆ ಉತ್ಪಾದನೆ ಪ್ರಾರಂಭಿಸಲಿದ್ದು, ದೇಶದಲ್ಲಿರುವ ಬೇಡಿಕೆಯನ್ನು ಸರಿದೂಗಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದರು. 

ಬೈಯೋಲಾಜಿಕಲ್ ಇ ಹಾಗೂ ನೊವಾರ್ಟಿಸ್ ಲಸಿಕೆಗಳು ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಝೈಡಸ್ ಕ್ಯಾಡಿಲಾ ಶೀಘ್ರವೇ ತಜ್ಞರ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದರು. 

ಝೈಡಸ್ ಕ್ಯಾಡಿಲಾ ಕಳೆದ ತಿಂಗಳು ತುರ್ತು ಬಳಕೆಗೆ ಅನುಮತಿ ಕೋರಿರುವುದಾಗಿ ತಿಳಿಸಿತ್ತು. 10-12 ಕೋಟಿ ಡೋಸ್ ಗಳನ್ನು ಉತ್ಪಾದಿಸುವ ಗುರಿ ಹೊಂದಿರುವುದಾಗಿ ಝೈಡಸ್ ಹೇಳಿದೆ. 50 ಕೇಂದ್ರಗಳಲ್ಲಿ ಈ ವರೆಗೂ ಝೈಡಸ್ ಸಂಸ್ಥೆ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಿದೆ. ಝುಕೋವ್-ಡಿ ಮಾನವ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ಡಿಎನ್ಎ ಲಸಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com