ಕೋವಿಡ್-19: ವೈದ್ಯಕೀಯ ಸಿಬ್ಬಂದಿಗೆ ಸೋಂಕು ಮರುಕಳಿಸಿದ್ದ ಪ್ರಕರಣಗಳ ಡೇಟಾ ಏಮ್ಸ್ ಬಳಿ ಇಲ್ಲ

ದೆಹಲಿಯ ಏಮ್ಸ್ ನಲ್ಲಿ ಕೊರೋನಾ ಸಾಂಕ್ರಾಮಿ ಪ್ರಾರಂಭವಾದ ಬಳಿಕ ಈ ವರೆಗೂ 3,400 ಮಂದಿ ವೈದ್ಯಕೀಯ ಸಿಬ್ಬಂದಿಗಳು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ.
ದೆಹಲಿ ಏಮ್ಸ್ (ಸಂಗ್ರಹ ಚಿತ್ರ)
ದೆಹಲಿ ಏಮ್ಸ್ (ಸಂಗ್ರಹ ಚಿತ್ರ)

ನವದೆಹಲಿ: ದೆಹಲಿಯ ಏಮ್ಸ್ ನಲ್ಲಿ ಕೊರೋನಾ ಸಾಂಕ್ರಾಮಿ ಪ್ರಾರಂಭವಾದ ಬಳಿಕ ಈ ವರೆಗೂ 3,400 ಮಂದಿ ವೈದ್ಯಕೀಯ ಸಿಬ್ಬಂದಿಗಳು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ.

ಆದರೆ ಲಸಿಕೆ ಅಭಿಯಾನ ಪ್ರಾರಂಭವಾದ ಬಳಿಕ ಹಾಗೂ ಎರಡನೇ ಅಲೆ ಪ್ರಾರಂಭವಾದ ಬಳಿಕ ಎಷ್ಟು ಮಂದಿ ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ಮರುಕಳಿಸಿದೆ ಎಂಬ ಬಗ್ಗೆ ಏಮ್ಸ್ ಬಳಿ ಪ್ರತ್ಯೇಕ ಡೇಟಾ ಇಲ್ಲ ಎಂಬ ಮಾಹಿತಿ ಆರ್ ಟಿಐ ನಿಂದ ಬಹಿರಂಗಗೊಂಡಿದೆ. 

ಏಪ್ರಿಲ್-ಮೇ ತಿಂಗಳಲ್ಲಿ ಎರಡನೇ ಅಲೆ ತೀವ್ರವಾಗಿದ್ದಾಗ, ಸೋಂಕಿಗೆ ಗುರಿಯಾಗಿದ್ದ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಬಗ್ಗೆ ಮಾಹಿತಿ ಕೇಳಿ ಸಲ್ಲಿಸಲಾಗಿದ್ದ ಆರ್ ಟಿಐ ಪ್ರತಿಕ್ರಿಯೆಯಲ್ಲಿ, ಜುಲೈ 6 ರ ಒಟ್ಟು ದೃಢ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿತ್ತು. ಆರ್ ಟಿಐ ಮಾಹಿತಿಯಲ್ಲಿ ಸಾಂಕ್ರಾಮಿಕ ಮರುಕಳಿಸಿದ ವೈದ್ಯಕೀಯ ಸಿಬ್ಬಂದಿಗಳ ಬಗ್ಗೆಯೂ ಮಾಹಿತಿ ಕೇಳಿತ್ತು. 

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಏಮ್ಸ್ ಆಡಳಿತ, "ಸೋಂಕು  ಸಿಬ್ಬಂದಿಗಳಿಗೆ ಮರುಕಳಿಸಿದ ಪ್ರಕರಣಗಳ ಪ್ರತ್ಯೇಕ ಡೇಟಾ ಇಲ್ಲ" ಎಂದು ಹೇಳಿದೆ. ಆದರೆ ಏಮ್ಸ್ ಹಿರಿಯ ಸದಸ್ಯರೊಬ್ಬರು ಗೌಪ್ಯತೆಯ ಷರತ್ತು ವಿಧಿಸಿ ಮಾಹಿತಿ ನೀಡಿದ್ದು, ಎರಡನೇ ಅಲೆಯಲ್ಲಿ ಸೋಂಕು ಮರುಕಳಿಸಿರುವ ಪ್ರಕರಣಗಳು ವರದಿಯಾಗಿದ್ದವು ಎಂದು ಹೇಳಿದ್ದಾರೆ. 

ಆದರೆ ಕೊರೋನಾ ವೈರಸ್ ಮರುಕಳಿಸಿರುವ ಬಗ್ಗೆ ಏಮ್ಸ್ ನಲ್ಲಿ ದಾಖಲೆ, ವಿವರಗಳನ್ನು ನಿರ್ವಹಿಸಿಲ್ಲ ಒಟ್ಟಾರೆ 6,954 ಮಂದಿಗೆ ಏಮ್ಸ್ ನಲ್ಲಿ ಸೋಂಕು ತಗುಲಿದ್ದು 3,568 ಡಿಪೆಂಡೆಂಟ್ ಸಿಬ್ಬಂದಿಯಾಗಿದ್ದು, 3,386 ಆರೋಗ್ಯ ಕಾರ್ಯಕರ್ತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com