ಮುಂಗಾರು ಅಧಿವೇಶನ: 96 ಗಂಟೆಗಳ ಪೈಕಿ ಲೋಕಸಭೆ ಕಾರ್ಯನಿರ್ವಹಿಸಿದ್ದು ಕೇವಲ 21 ಗಂಟೆಗಳು ಮಾತ್ರ!

ಈ ಬಾರಿಯ ಮುಂಗಾರು ಅಧಿವೇಶನದ ಉತ್ಪಾದಕತೆ ತೀವ್ರವಾಗಿ ಕುಸಿತ ಕಂಡಿದ್ದು, ಲೋಕಸಭೆಯ ಸ್ಪೀಕರ್ ಕಲಾಪ ನಡೆದ ಒಟ್ಟು ಗಂಟೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 
ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ
ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ

ನವದೆಹಲಿ: ಈ ಬಾರಿಯ ಮುಂಗಾರು ಅಧಿವೇಶನದ ಉತ್ಪಾದಕತೆ ತೀವ್ರವಾಗಿ ಕುಸಿತ ಕಂಡಿದ್ದು, ಲೋಕಸಭೆಯ ಸ್ಪೀಕರ್ ಕಲಾಪ ನಡೆದ ಒಟ್ಟು ಗಂಟೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರೆಗೂ ಲೋಕಸಭೆ ಕೇವಲ 21 ಗಂಟೆ 14 ನಿಮಿಷ ಕಾರ್ಯನಿರ್ವಹಣೆ ಮಾಡಿದೆ ಎಂದು ತಿಳಿಸಿದ್ದಾರೆ. 

ನಿಗದಿತ 96 ಗಂಟೆಗಳ ಪೈಕಿ 74 ಗಂಟೆ 46 ನಿಮಿಷಗಳು ಕಾರ್ಯನಿರ್ವಹಣೆ ಸಾಧ್ಯವಾಗಿಲ್ಲ ಎಂದು ಓಂ ಪ್ರಕಾಶ್ ಬಿರ್ಲಾ ಹೇಳಿದ್ದಾರೆ. 

ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, 17 ನೇ ಲೋಕಸಭೆಯ 6 ನೇ ಸೆಷನ್ ಇಂದಿಗೆ ಮುಕ್ತಾಯಗೊಂಡಿದೆ. ಎಲ್ಲಾ ಸಂಸದರನ್ನು ಸಂಸತ್ ನ ಸಂಪ್ರದಾಯ ಘನತೆಯನ್ನು ಪಾಲಿಸುವುದಕ್ಕೆ ಒತ್ತಾಯಿಸಿದೆ. ಘೋಷಣೆ ಕೂಗುವುದು, ಬ್ಯಾನರ್ ಹಿಡಿಯುವುದು ನಮ್ಮ ಸಂಸತ್ ನ ಸಂಪ್ರದಾಯವಲ್ಲ. ಸಂಸದರು ತಮ್ಮ ಸ್ಥಾನದಿಂದಲೇ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದಿತ್ತು"  ಎಂದು ಓಂ ಬಿರ್ಲಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com